Wednesday, June 17, 2026
spot_imgspot_img
spot_imgspot_img

ಕಾಸರಗೋಡು: ನಾಪತ್ತೆಯಾಗಿದ್ದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆ

- Advertisement -
- Advertisement -

ಕಾಸರಗೋಡು: ನಾಪತ್ತೆಯಾಗಿದ್ದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ ಘಟನೆ ನಡೆದಿದೆ. ಆದೂರು ನಿವಾಸಿ ಬಿ.ಎ. ಖಾಸಿಂ(28) ಮೃತ ದುರ್ದೈವಿ.

ಖಾಸಿಂ ಜು.21 ರಿಂದ ಮನೆಯಿಂದ ನಾಪತ್ತೆಯಾಗಿದ್ದ. ಕೋಝಿಕ್ಕೋಡ್ ನಲ್ಲಿ ಕೆಲಸ ಮಾಡುತ್ತಿದ್ದ ಖಾಸಿಂ ಇತ್ತೀಚೆಗೆ ವಾಪಸ್ ಬಂದಿದ್ದ. ಯುವಕ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ಕೂಡ ದಾಖಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದರು.

ಹುಡುಕಾಟದ ವೇಳೆ ಆದೂರು ಚೆಕ್ ಪೋಸ್ಟ್ ಬಳಿಯ ಬಾವಿಯಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!