Tuesday, August 18, 2026
spot_imgspot_img
spot_imgspot_img

ಕಾಸರಗೋಡು: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು..!

- Advertisement -
- Advertisement -

ಕಾಸರಗೋಡು: ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಕಾಞಂಗಾಡ್ ನ ಆರಾಯಿ ಎಂಬಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿ ಆರಾಯಿ ಬಾಕೋಟ್ ನ ಬಿ.ಕೆ. ಅಬ್ದುಲ್ ಕುಂಞಖೆ ಎಂಬವರ ಪುತ್ರ, ಹತ್ತನೇ ತರಗತಿಯ ವಿದ್ಯಾರ್ಥಿ ಬಿ.ಕೆ. ಮುಹಮ್ಮದ್ ಸಿನಾನ್ (16) ಎಂದು ಗುರುತಿಸಲಾಗದೆ.

ಮಂಗಳವಾರ ಬೆಳಗ್ಗೆ ಇಬ್ಬರು ಸ್ನೇಹಿತರ ಜೊತೆ ಆರಾಯಿ ನದಿಗೆ ಸ್ನಾನಕ್ಕಿಳಿದಿದ್ದು, ಸುಳಿಗೆ ಸಿಲುಕಿ ನೀರುಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸರವಾಸಿಗಳು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು

- Advertisement -

Related news

error: Content is protected !!