Sunday, November 1, 2026
spot_imgspot_img
spot_imgspot_img

ಮಧ್ಯಪ್ರದೇಶ: ವಿಷಕಾರಿ ಅನಿಲ ಸೋರಿಕೆ – ನಾಲ್ವರು ಕಾರ್ಮಿಕರು ಸಾವು

- Advertisement -
- Advertisement -

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯ ದೇವಾಸ್ ರಸ್ತೆಯಲ್ಲಿರುವ ಹೋಟೆಲ್ ಶ್ರೀ ಗಂಗಾದಲ್ಲಿ ವಿಷಕಾರಿ ಅನಿಲ ಸೋರಿಕೆಯ ಶಂಕೆಯಿಂದ ಭೀಕರ ದುರಂತ ಸಂಭವಿಸಿದೆ. ಹೋಟೆಲ್‌ನ ಭೂಗತ ತ್ಯಾಜ್ಯ ಸಂಗ್ರಹ ಕೊಠಡಿಯನ್ನು ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲವನ್ನು ಉಸಿರಾಡಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕಾರ್ಮಿಕರನ್ನು ರಕ್ಷಿಸಲು ತೆರಳಿದ್ದ ಇನ್ನಿಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಉಜ್ಜಯಿನಿಯ ವಾಲ್ಮೀಕಿ ನಗರದ ನಿವಾಸಿಗಳಾದ ಕಮಲೇಶ್ ಮತ್ತು ನಿತಿನ್, ಸೋಮವಾರಿಯ ನಿವಾಸಿ ವಾಹಿದ್ ಹಾಗೂ ರಾಜಸ್ಥಾನದ ಝಲಾವರ್ ನಿವಾಸಿ ಮನೋಜ್ ಮೀನಾ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಸುಮಾರು 10:30ರ ವೇಳೆಗೆ ಹೋಟೆಲ್‌ನ ಕೆಲವು ಸಿಬ್ಬಂದಿ ತ್ಯಾಜ್ಯ ಸಂಗ್ರಹ ಕೊಠಡಿಯನ್ನು ಸ್ವಚ್ಛಗೊಳಿಸಲು ಒಳಗೆ ತೆರಳಿದ್ದರು. ಹೋಟೆಲ್‌ನ ಸಿಹಿತಿಂಡಿ ಮತ್ತು ಡೈರಿ ವಿಭಾಗಗಳಲ್ಲಿ ಉಳಿದ ಆಹಾರ, ನೀರು, ಸಕ್ಕರೆ ಪಾಕ, ತುಪ್ಪ ಹಾಗೂ ಎಣ್ಣೆಯಂತಹ ತ್ಯಾಜ್ಯವನ್ನು ಸಂಗ್ರಹಿಸಿ ಒಳಚರಂಡಿಗೆ ಹರಿಸಲು ಈ ಕೊಠಡಿಯನ್ನು ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ.

ಈ ವೇಳೆ ವಿಷಕಾರಿ ಅನಿಲ ಸೋರಿಕೆಯಾಗಿ ಕಾರ್ಮಿಕರು ಕೊಠಡಿಯೊಳಗೆ ಕುಸಿದು ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ತೆರಳಿದ ಇನ್ನಿಬ್ಬರು ಕೂಡ ಅನಿಲದ ಪ್ರಭಾವಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು, ರಕ್ಷಣಾ ತಂಡಗಳು ಮತ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಕೊಠಡಿಯೊಳಗೆ ಸಿಲುಕಿದ್ದ ಕಾರ್ಮಿಕರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಹೊರತೆಗೆದ ಕಾರ್ಮಿಕರಿಗೆ ಪೊಲೀಸರು ಸ್ಥಳದಲ್ಲೇ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ, ನಾಲ್ವರು ಕಾರ್ಮಿಕರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಸ್ವಸ್ಥರಾದ ಇನ್ನಿಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

- Advertisement -

Related news

error: Content is protected !!