Monday, June 15, 2026
spot_imgspot_img
spot_imgspot_img

ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ- ಯುವಕ ಸಾವು

- Advertisement -
- Advertisement -

ಕಾಸರಗೋಡು: ಬೈಕೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಯುವ ಇಂಜಿನೀಯರ್ ಮೃತಪಟ್ಟ ಘಟನೆ ಇರಿಯಣ್ಣಿ ಮಂಜಕಲ್ ಎಂಬಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ಬೇತೂರುಪಾರ ವಟ್ಟಂತಟ್ಟ್ ನ ಎಂ .ಜಿತೇಶ್ (22) ಎಂದು ಗುರುತಿಸಲಾಗಿದೆ.

ಕಾನತ್ತೂರು ಕಡೆಯಿಂದ ಇರಿಯಣ್ಣಿ ಕಡೆಗೆ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸು ತಂಗುದಾಣದ ಕಂಬಕ್ಕೆ ಬಡಿದು ಮಗುಚಿ ಈ ದುರ್ಘಟನೆ ನಡೆದಿದೆ.

ಜಿತೇಶ್ ಬೆಂಗಳೂರಿನ ಏರೋನಾಟಿಕ್ ಇಂಜಿನೀಯರ್ ಆಗಿದ್ದರು. ಓಣಂ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಅದೂರು ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.

- Advertisement -

Related news

error: Content is protected !!