Sunday, June 14, 2026
spot_imgspot_img
spot_imgspot_img

ಧ್ವನಿ ಬೆಳಕು ಮಾಲೀಕರ ನಿಸ್ಸಾಹಕಾರ ಪ್ರತಿಭಟನೆಗೆ ಕಾಸರಗೋಡು ವಲಯ ಸದಸ್ಯರ ಬೆಂಬಲ

- Advertisement -
- Advertisement -

ವಿಟ್ಲ: ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧ್ವನಿ ವರ್ಧಕ ಬಳಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸರಕಾರದ ನಿಲುವುಗಳು ಧ್ವನಿ ವರ್ಧಕ ವೃತ್ತಿ ಬದುಕಿಗೆ ಬಹಳ ತೊಂದರೆ ಉಂಟು ಮಾಡಿದೆ.

ಸಾರ್ವಜನಿಕ ಸಮಾರಂಭ ಗಳಲ್ಲಿ ಅಳವಡಿಸಿದ ಧ್ವನಿ ವರ್ಧಕಗಳನ್ನು ಮುಟ್ಟುಗೊಲು ಹಾಕಿದ್ದರಿಂದ ವ್ಯವಹಾರ ಕಷ್ಟ ಸಾಧ್ಯವಾಗಿದೆ. ಹಬ್ಬ ಹರಿದಿನಗಳು ಧ್ವನಿ ವರ್ಧಕ ವೃತ್ತಿಯ ಆದಾಯದ ಮೂಲಗಳಾಗಿವೆ. ಈ ಸಮಯದಲ್ಲಿ ಇಂತಹ ಕಾನೂನು ಜಾರಿಯಿಂದ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿದೆ.

ಇದರಿಂದಾಗಿ ಯಾವುದೇ ಸಾರ್ವಜನಿಕ ಸಮಾರಂಭಗಳಿಗೆ ಧ್ವನಿ ವರ್ಧಕ ಒದಗಿಸದೆ ನಿಸ್ಸಾಹಕಾರ ಪ್ರತಿಭಟನೆ ನಡೆಸಲು ಜಿಲ್ಲಾ ಸಮಿತಿ ನಿರ್ಧರಿಸುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ಇಲ್ಲದ ಕಾಸರಗೋಡು ವಲಯದ ಎಸ್ಎಮ್ಎಸ್ ಸೌಂಡ್ಸ್ ನವರು ವಿಟ್ಲಕ್ಕೆ ಆಗಮಿಸಿದ್ದರು. ಅವರಲ್ಲಿ ಪ್ರತಿಭಟನೆ ವಿಚಾರ ತಿಳಿಸಿದಾಗ ಸಹಕರಿಸಿ ಹಿಂದೆ ತೆರಳಿದ್ದಾರೆ.

ಈ ಸಂದರ್ಭ ವಿಟ್ಲ ವಲಯ ಅಧ್ಯಕ್ಷ ಸಂತೋಷ್ ಕನ್ಯಾನ, ಕಾರ್ಯದರ್ಶಿ ಸಿದ್ದಿಕ್ ಸಿಎಂ ಹಾಗೂ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!