- Advertisement -
- Advertisement -


ಕಾಸರಗೋಡು: ಹಾಲು ತರಲೆಂದು ಅಂಗಡಿಗೆ ಹೋದ ಬಾಲಕಿಯೋರ್ವಳು ನಿಗೂಢವಾಗಿ ನಾಪತ್ತೆಯಾದ ಘಟನೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ ಹಿದಾಯತ್ ಬಜಾರ್ ನಲ್ಲಿ ವಾಸವಾಗಿರುವ ಶಿವಮೊಗ್ಗ ಮೂಲದ ಸಾನಿಯಾ (17) ನಾಪತ್ತೆಯಾದವಳು.

ಹಾಲು ತರಲೆಂದು ಮಂಗಳವಾರ ಬೆಳಿಗ್ಗೆ ಅಂಗಡಿಗೆ ತೆರಳಿದ್ದ ಸಾನಿಯಾ ಮನೆಗೆ ಮರಳದೆ ನಾಪತ್ತೆಯಾಗಿದ್ದಳು. ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.




- Advertisement -








