Friday, April 26, 2024
spot_imgspot_img
spot_imgspot_img

ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಕೊಂಚಾಡಿಯಲ್ಲಿ ಇಂದು ಆರಂಭ..

- Advertisement -G L Acharya panikkar
- Advertisement -

(ಚಿತ್ರ : ಮಂಜು ನೀರೇಶ್ವಾಲ್ಯ)

ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಮಂಗಳೂರಿನ ಕೊಂಚಾಡಿ ಕ್ಷೇತ್ರದ   ಶ್ರೀ ಕಾಶೀಮಠದ ಶಾಖಾಮಠದಲ್ಲಿ ಇಂದು ಪ್ರಾರಂಭ .ಗೌಡ ಸಾರಸ್ವತ ಸಮಾಜದ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ಮಂಗಳೂರಿನ ಕೊಂಚಾಡಿ ಕ್ಷೇತ್ರದ   ಶ್ರೀ ಕಾಶೀಮಠದ ಶಾಖಾಮಠದಲ್ಲಿ ಶುಕ್ರ ವಾರದಂದು (ಜೂ  ೧೦) ಮೃತಿಕಾ ಪೂಜನೆಯೊಂದಿಗೆ ಪ್ರಾರಂಭವಾಗಲಿರುವುದು .ಪ್ರಾತಃ ಕಾಲ ಶ್ರೀ ಸಂಸ್ಥಾನದ ಶ್ರೀದೇವರುಗಳಿಗೆ ಪಂಚಾಮೃತ, ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕ , ಶತಕಲಶಾಭಿಷೇಕ ಬಳಿಕ ಪವಮಾನ ಅಭಿಷೇಕಗಳು ಶ್ರೀಗಳವರ ದಿವ್ಯ ಹಸ್ತಗಳಿಂದ ನೆರವೇರಲಿರುವುದು , ಬಳಿಕ  ತಪ್ತ ಮುದ್ರಾಧಾರಣೆ ನಡೆಯಲಿರುವುದು . ಸಾಯಂಕಾಲ ಮೃತಿಕಾ ಪೂಜನೆ ಬಳಿಕ ಸಭಾ ಕಾರ್ಯಕ್ರಮ ಜರಗಲಿರುವುದು .ಸಮಾಜ ಭಾಂದವರಿಗೆ ಪಾಲ್ಗೊಳ್ಳುವ ಅಥವಾ ಭಾಗವಹಿಸುವ ಅವಕಾಶ ವಿರುವುದಿಲ್ಲ .ಸಂಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಭಜಕರು ಈ ದೂರವಾಣಿ ಸಂಖ್ಯೆಗಳಿಗೆ ೯೪೪೯೩೬೨೯೦೯–೯೪೪೮೮೪೫೯೦೯ ಸಂಪರ್ಕಿಸಬೇಕಾಗಿ ವಿನಂತಿ.

ಚಾತುರ್ಮಾಸ್ಯ ವೃತದ ಪ್ರಯುಕ್ತ ಸಂಯಮೀಂದ್ರ ತೀರ್ಥರು ಜೂನ್  ೩೦ ರಂದು ಕೊಂಚಾಡಿ ಶಾಖಾಮಠ   ತಲಪಿದ್ದರು. ಆ ಸಂದರ್ಭದಲ್ಲಿ ಶಾಖಾಮಠದ ವ್ಯವಸ್ಥಾಪಕ ಸಮಿತಿ , ವೈದಿಕರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಗಿತ್ತು.ಸೆಪ್ಟಂಬರ್ ೨ ರ ಬುಧವಾರ  ಮೃತಿಕಾ ವಿಸರ್ಜನೆ, ಸೀಮೋಲ್ಲಂಘನೆ ಮೂಲಕ ಕಾಶೀಮಠಾಧೀಶರ ಚಾತುರ್ಮಾಸ ಕೊನೆಗೊಳ್ಲಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ,  ಪಾರಾಯಣಗಳು ನಡೆಯಲಿವೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಗಳು ನಡೆಯುವ ಸಂದರ್ಭದಲ್ಲಿ ಸಮಾಜ ಭಾಂದವರಿಗೆ ಪಾಲ್ಗೊಳ್ಳುವ ಅಥವಾ ಭಾಗವಹಿಸುವ ಅವಕಾಶ ವಿರುವುದಿಲ್ಲ . ಅತೀ ಸರಳ ರೀತಿಯಲ್ಲಿ ಈ ಬಾರಿ ಚಾತುರ್ಮಾಸದ ಕಾರ್ಯಕ್ರಮಗಳು ನಡೆಯಲಿರುವುದು . ಜುಲೈ  ೨೫ ರಂದು ನಾಗಪಂಚಮಿ, ಮಾಧವೇಂದ್ರ ಸ್ವಾಮಿ ಪುಣ್ಯತಿಥಿ, ಆಗಸ್ಟ್ ೮ರಂದು ಖುಗೋಪಕರ್ಮ,ಆಗಸ್ಟ್ ೧೧ ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಚಾತುರ್ಮಾಸ ಸಮಿತಿ, ಕಾಶಿಮಠದ ಶಾಖಾಮಠದಲ್ಲಿ ಆಯೋಜಿಸಿದೆ.ಇದಲ್ಲದೇ ಆಗಸ್ಟ್ ೨೨ -೨೬ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ ೧ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ. ಸೆಪ್ಟಂಬರ್ ೧೮ ರಿಂದ ಅಧಿಕಮಾಸ ಪ್ರಾರಂಭ , ಅಕ್ಟೋಬರ್ ೧೭ ರಿಂದ ನವರಾತ್ರಿ ಆಚರಣೆ ಪ್ರಾರಂಭವಾಗಲಿದ್ದು ಅಕ್ಟೋಬರ್ ೨೮ ರ ವರೆಗೆ ವಿವಿಧ ವಾಹನ ಪೂಜಾ ಸೇವೆಗಳು ನಡೆಯಲಿರುವುದು .

ಈ ಬಾರಿ ಕೊರೊನ ಸೋಂಕು ದಿನೇ ದಿನೇ ಹೆಚ್ಚು ಹರಡುತಿದ್ದು ಕೋವಿಡ್-19 (ಕೊರೋನ ವೈರಾಣು) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡುವುದು ಕಷ್ಟವಾಗುವುದರಿಂದ ಭಕ್ತಾದಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಭಂದಿಸಲಾಗಿದೆ.  ಸರ್ಕಾರದ ಅನ್ವಯದಂತೆ ಶ್ರೀ ದೇವಳದಲ್ಲಿ ಸುರಕ್ಷತಾ ದೃಷ್ಠಿಯನುಸಾರ ಕೈಗೊಳ್ಳ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳು ಈ ಕೆಳಗಿನಂತಿದ್ದು ಕಡ್ಡಾಯವಾಗಿ ಪಾಲಿಸ ಬೇಕಾಗಿ ವಿನಂತಿ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾದಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು. ನಮ್ಮೆಲ್ಲರ ಹಿತದೃಷ್ಟಿಯಿಂದ ಈ ಎಲ್ಲಾ ಬದಲಾವಣೆಯ ವ್ಯವಸ್ಥೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಹೃದಯಿ ಭಕ್ತಾದಿ ಬಂಧುಗಳು ಸಹಕರಿಸ ಬೇಕಾಗಿ ಈ ಮೂಲಕ ಚಾತುರ್ಮಾಸ ಸಮಿತಿಯ ಡಿ ವಾಸುದೇವ್ ಕಾಮತ್ ಮತ್ತು ಕಸ್ತುರಿ ಸದಾಶಿವ ಪೈ  ವಿನಂತಿಸಿಕೊಂಡಿದ್ದಾರೆ .

- Advertisement -

Related news

error: Content is protected !!