Friday, April 26, 2024
spot_imgspot_img
spot_imgspot_img

ಕಣಿವೆ ನಾಡಿನಲ್ಲಿ ಕ್ಷೀಣಿಸಿದ ಉಗ್ರರ ಸಂಖ್ಯೆ; ಕಳೆದ ವರ್ಷ ಎಷ್ಟು ಉಗ್ರರನ್ನು ಹತ್ತಿಕ್ಕಿದ್ದಾರೆ ಗೊತ್ತಾ..?

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla
vtv vitla

ಶ್ರೀನಗರ: ಕಣಿವೆ ನಾಡಿನಲ್ಲಿ ಉಗ್ರರ ಸಂಖ್ಯೆ ಕ್ಷೀಣಿಸಿದೆ. ಕಳೆದ ಮೂರು ದಶಕಗಳಲ್ಲೇ ಉಗ್ರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಈ ಮೂಲಕ ಕಾಶ್ಮೀರದಲ್ಲಿ ಉಗ್ರರನ್ನು ದಮನಿಸುವ ಉತ್ತಮ ಕೆಲಸ ನಡೆಯುತ್ತಿದೆ.

ಈ ಬಗ್ಗೆ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಶ್ಮೀರ ವಲಯ ಐಜಿಪಿ ವಿಜಯ್‌ಕುಮಾರ್ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯ ಉಗ್ರರ ಸಂಖ್ಯೆ ಕ್ಷೀಣಿಸುತ್ತಿದ್ದು, ಮೂರು ದಶಕಗಳಲ್ಲೇ ಉಗ್ರರ ಸಂಖ್ಯೆ 200ಕ್ಕಿಂತ ಕಡಿಮೆಯಾಗಿದೆ.

ಸದ್ಯ ಸ್ಥಳೀಯ ಸಕ್ರಿಯ ಉಗ್ರರ ಸಂಖ್ಯೆ 86 ಇದೆ. 2021ರಲ್ಲಿ ಉಗ್ರ ಪಡೆ ಸೇರಿದ್ದ 128 ಸ್ಥಳೀಯ ಉಗ್ರರಲ್ಲಿ 73 ಮಂದಿಯನ್ನು ಹತ್ಯೆ ಮಾಡಲಾಗಿದ್ದು, 17 ಮಂದಿಯನ್ನು ಬಂಧಿಸಲಾಗಿದೆ. 2021ರಲ್ಲಿ ಉಗ್ರ ಪಡೆ ಸೇರಿದ 39 ಮಂದಿ ಮಾತ್ರ ಸದ್ಯ ಸಕ್ರಿಯರಾಗಿದ್ದಾರೆ’ ಎಂದು ಹೇಳಿದರು.

ಕಾಶ್ಮೀರ ವಲಯ ಐಜಿಪಿ ವಿಜಯ್‌ಕುಮಾರ್

ಜನರಲ್ ಕಮಾಂಡಿಂಗ್ ಆಫೀಸರ್ ಡಿ.ಪಿ.ಪಾಂಡೆ ಮಾತನಾಡಿ, ‘ಉಗ್ರರ ನೇಮಕಾತಿಯೂ ಕೂಡ ಕಡಿಮೆಯಾಗಿದ್ದು, ಕಳೆದ ವರ್ಷ 180 ಉಗ್ರರ ನೇಮಕ ನಡೆದಿತ್ತು. ಈ ಬಾರಿ 128ರಿಂದ 130 ಉಗ್ರರ ನೇಮಕ ನಡೆದಿದೆ’ ಎಂದರು.

ಕಾಶ್ಮೀರದಲ್ಲಿ ಈ ವರ್ಷ 87 ಎನ್‌ಕೌಂಟರ್ ನಡೆದಿದ್ದು, 19 ವಿದೇಶಿ ಉಗ್ರರು, 149 ಸ್ಥಳೀಯರು ಸೇರಿ 168 ಉಗ್ರರನ್ನು ಭದ್ರತೆ ಪಡೆಗಳು ಕೊಂದುಹಾಕಿವೆ. ಕಳೆದ ವರ್ಷ 200 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

vtv vitla
vtv vitla
- Advertisement -

Related news

error: Content is protected !!