Friday, April 26, 2024
spot_imgspot_img
spot_imgspot_img

ನೌಕಪಡೆಗೆ ‘ಕವರತ್ತಿ’ ಬಲ

- Advertisement -G L Acharya panikkar
- Advertisement -

ವಿಶಾಖಪಟ್ಟಣ: ಸ್ವದೇಶಿ ನಿರ್ಮಿತ ಸುಸಜ್ಜಿತ ಜಲಾಂತರ್ಗಾಮಿ-ನಿರೋಧಕ ಸಮರಾಸ್ತ್ರ ಸಜ್ಜಿತ ಯುದ್ಧ ನೌಕೆ ‘ಐಎನ್​ಎಸ್ ಕವರತ್ತಿ’ ಗುರುವಾರ ಭಾರತೀಯ ನೌಕಾಪಡೆಗೆ ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ವಿದ್ಯುಕ್ತವಾಗಿ ಸೇರ್ಪಡೆಗೊಂಡಿತು. ಭೂ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಸಬ್​ಮೆರಿನ್ -ವಿರೋಧಿ ಸಮರದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಕವರತ್ತಿಯನ್ನು ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ನೌಕಾಪಡೆ ವಿನ್ಯಾಸ ನಿರ್ದೇಶನಾಲಯ (ಡಿಎನ್​ಡಿ) ವಿನ್ಯಾಸಗೊಳಿಸಿದೆ. ಕೋಲ್ಕತಾದ ಗಾರ್ಡನ್ ರೀಚ್ ಶಿಪ್​ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ ಇದನ್ನು ನಿರ್ವಿುಸಿದೆ.


ಕವರತ್ತಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಸೆನ್ಸರ್ ವ್ಯವಸ್ಥೆ ಇದ್ದು ಜಲಾಂತರ್ಗಾಮಿಗಳನ್ನು ಪತ್ತೆ ಮಾಡಿ ಅವುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

- Advertisement -

Related news

error: Content is protected !!