Tuesday, July 21, 2026
spot_imgspot_img
spot_imgspot_img

ಕೆಲಿಂಜ: ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿಯ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ

- Advertisement -
- Advertisement -

ಧಾರ್ಮಿಕ ಸಭೆ

ಕೆಲಿಂಜ: “ಕಲಿಯುಗದಲ್ಲಿ ಭಜನೆ ಶ್ರೇಷ್ಠವಾದುದು. ಧರ್ಮ ಜಾಗೃತಿಗೆ ಭಜನೆ ಅತ್ಯಗತ್ಯ. ಭಜನೆಯಿಂದ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಸಾಧಿಸಬಹುದು. ,” ಎಂದು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಕೆಲಿಂಜ ಶ್ರೀ ಕೆಲಿಂಜೇಶ್ವರಿ ಉಳ್ಳಾಲ್ತಿ ಕ್ಷೇತ್ರದಲ್ಲಿ ಕೆಲಿಂಜೇಶ್ವರಿ ಭಜನಾ ಮಂಡಳಿಯ 50 ನೇ ವರ್ಷದ ಸುವರ್ಣ ಮಹೋತ್ಸವ ದ ಧಾರ್ಮಿಕ ಸಭೆಯಲ್ಲಿ ಅಶೀರ್ವಚನ ನೀಡಿದರು. ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಕೆಲಿಂಜ ಕ್ಷೇತ್ರ ತುಳುನಾಡಿನ ಶ್ರೇಷ್ಠ ವಾದ ಧರ್ಮ ಆಧ್ಯಾತ್ಮದ ಕ್ಷೇತ್ರದಲ್ಲಿ ನಿರಂತರವಾದ ಹರಿಣಾಮ ಸಂಕೀರ್ತನೆ ನಡೆಯುತ್ತಿರುವುದು ಭಕ್ತರ ಭಕ್ತಿಯನ್ನು ಉದ್ದೀಪನ ಗೊಳಿಸಿದೆ ಎಂದರು.

ಸಭೆಯ ಅಧ್ಯಕ್ಷತೆ ಯನ್ನು ಕೆಲಿಂಜ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಲಿಂಜೇಶ್ವರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಗಿರಿಧರ ರೈ ಮಂಜಾಳ್ವ ಬೆಂಞಂತಿಮಾರ್ ಗುತ್ತು, ಅಧ್ಯಕ್ಷ ಆನಂದ ಸಪಲ್ಯ ಹೆಗ್ಗಡೆ ಕೋಡಿ, ಸಾಯಿಗಣೇಶ್ ಇಂಡೇನ್ ಗ್ಯಾಸ ನ ಸತೀಶ್ ಆಳ್ವ, ಕಲ್ಲಡ್ಕ ಲಕ್ಷ್ಮಿ ಗಣೇಶ್ ಕೆ ಟಿ ಹೋಟೆಲ್ ನ ರಾಜೇಂದ್ರ ಎನ್ ಹೊಳ್ಳ, ಶ್ರವಣ ಜುವೆಲ್ಲರ್ಸ್ ನ ಸದಾಶಿವ ಆಚಾರ್ಯ ಇವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಲ್ಲಿ ಕೆಲಿಂಜೇಶ್ವರಿ ಭಜನಾ ಮಂಡಳಿಯ ಸ್ಥಾಪಕ ದಿ ಪುಂಡಿಕಾಯಿ ಕೃಷ್ಣ ಭಟ್, ಕೃಷ್ಣಮೂರ್ತಿ ಗಾರ್ಡ್ ಕುಂಬಳೆ, ರವಿದಾಸ ಆಳ್ವ ನಡುವಲಚ್ಚಿಲ್, ಶಂಕರ ಮಡಿವಾಳ ಕಿನಿಲ, ಸುಂದರ ಬೆಳ್ಚಡ ನಕ್ಕಿಲಾರು, ಡೊಂಬಯ ಗೌಡ ಮಾಮೇಶ್ವರ, ಚಂದಪ್ಪ ಗೌಡ ನೆಕ್ಕಿಲಾರು, ದಿ ಕೃಷ್ಣಪ್ಪ ಪೂಜಾರಿ ಮಚ್ಚ, ಶಿವಪ್ಪ ಗೌಡ ಕೋಚೋಡಿ, ಗೋವಿಂದ ನಾಯ್ಕ ಕಿನಿಲ, ದಿ ಚಂದುನಾಯ್ಕ ಮುಡಿಮಾರು, ದಿ ಬಾಲಪ್ಪ ನಾಯ್ಕ, ಪ್ರತೀ ಸಂಕ್ರಮಣದಂದು ಭಜನಾ ಸೇವೆ ಮಾಡಿಸುವ ರಘು ಶೆಟ್ಟಿ ಕೋಡಿ ನಡುಬಲಚ್ಚಿಲು, ನರೇಶ ಶೆಟ್ಟಿ ಕಲ್ಮಲೆ, ಈಶ್ವರಭಟ್ ಪುಂಡಿಕಾಯಿ, ಪದ್ಮನಾಭ ರೈ ಪಾತ್ರಜಾಲು, ಬಾಲಕೃಷ್ಣ ಶೆಟ್ಟಿ ಕಂಬಳದಡ್ಡ, ಮೋಹಿತ್ ಶೆಟ್ಟಿ ಮಾಡದಾರು, ವಸಂತಿ ಜೆ ಶೆಟ್ಟಿ ಸೀನಾಜೆ, ಮನಿಷ್ ಶೆಟ್ಟಿ ಮಾಡದಾರು ಇವರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಪ್ರಾತಕಾಲ ಆರುಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆ ಪ್ರಾರಂಭಿಸಿದರು. ಇಪ್ಪತ್ತು ಭಜನಾ ಮಂಡಳಿ ತಂಡದಿಂದ ರಾತ್ರಿ ಒಂಬತ್ತರ ವರೆಗೆ ಭಜನಾ ಸಂಕೀರ್ತನೆ ನಡೆಯಿತು. ಭಜನಾ ಮಂಡಳಿಯ ಪ್ರಮುಖ ರಾದ ನಾಗಪ್ಪ ನಾಯ್ಕ ಮುಡಿಮಾರು, ಸಂತೋಷ್ ಶೆಟ್ಟಿ ಸೀನಾಜೆ, ಸಂದೀಪ್ ಪೂಜಾರಿ ಪೆಲತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ಕೆಲಿಂಜೇಶ್ವರಿ ಭಜನಾ ಮಂಡಳಿಯ ಸದಸ್ಯ ಶಿಕ್ಷಕ ಜಗದೀಶ್ ರೈ ನಡುವಲಚ್ಚಿಲು ಸ್ವಾಗತಿಸಿದರು. ಮನೋಹರ ನಾಯ್ಕ ಮಂಗಲಪದವು ವರದಿ ವಾಚಿಸಿದರು. ಶ್ರೀಧರ ಗೌಡ ನಡುವಲಚ್ಚಿಲು ವಂದಿಸಿದರು. ಉದಯ ಸಾಲಿಯಾನ್ ಕೆಲಿಂಜ, ತೀರ್ಥೇಶ್ ಮಾಡದಾರು ನಿರೂಪಿಸಿದರು. ಸರಿಗಮ ಖ್ಯಾತಿ ಯ ಜಗದೀಶ್ ಆಚಾರ್ಯ ಪುತ್ತೂರು ಬಳಗವರಿಂದ ಭಕ್ತಿ ಗಾನಸುಧಾ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!