Saturday, April 27, 2024
spot_imgspot_img
spot_imgspot_img

ವೀರಕಂಭ : ದ. ಕ. ಜಿ. ಪಂ. ಹಿ ಪ್ರಾ. ಶಾಲೆ, ಕೆಲಿಂಜ ಪ್ರತಿಭಾ ಪುರಸ್ಕಾರ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

- Advertisement -G L Acharya panikkar
- Advertisement -

ವೀರಕಂಭ : ದ. ಕ. ಜಿ. ಪಂ. ಹಿ ಪ್ರಾ. ಶಾಲೆ, ಕೆಲಿಂಜ ಪ್ರತಿಭಾ ಪುರಸ್ಕಾರ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವು ಡಿ.30 ರಂದು ಕೆಲಿಂಜ ಶಾಲಾ ರಂಗಮಂದಿರದಲ್ಲಿ ನಡೆಯಿತು.

ಡಿ.30ನೇ ಶನಿವಾರ ಪೂರ್ವಾಹ್ನ ಧ್ವಜಾರೋಹಣವನ್ನು ಕಲ್ಲಡ್ಕ ಹೋಟೆಲ್ ಲಕ್ಷ್ಮೀ ಗಣೇಶ್ ಮಾಲಕರಾದ ರಾಜೇಂದ್ರ ಹೊಳ್ಳ ಇವರು ನೆರವೇರಿಸಿದರು. ಬಳಿಕ ಹಳೆ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ಮಂಗಲಪದವು ಅಂಗನವಾಡಿ ಮಕ್ಕಳಿಂದ ಮತ್ತು ಕೆಲಿಂಜ ಶಾಲಾ LKG & UKG, ಶಾಲಾ ವಿದ್ಯಾರ್ಥಿಗಳಿಂದ, ಕೆಲಿಂಜ ಶಾಲಾ ಹಳೆ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ವೈವಿಧ್ಯ” ನಡೆಯಿತು.

ಸಾಯಂಕಾಲ ಗಂಟೆ 6.30ಕ್ಕೆ ಸಭಾ ಕಾರ್ಯಕ್ರಮವನ್ನು ಸುಬ್ರಾಯ ಪೈ ಗೌರವಾಧ್ಯಕ್ಷರು, RMSA ವಿಟ್ಲ , ದೀಪ ಬೆಳಗಿಸಿ ಉದ್ಘಾಟಿಸಿದರು. ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂದೀಪ್ ಪೂಜಾರಿ ಸದಸ್ಯರು, ಗ್ರಾ. ಪಂ. ವೀರಕಂಭ, ಜಯಪ್ರಸಾದ್ ಕಲ್ಮಲೆ ಸದಸ್ಯರು, ಗ್ರಾ. ಪಂ. ವೀರಕಂಭ , ಉಮಾವತಿ ಸದಸ್ಯರು, ಗ್ರಾ. ಪಂ. ವೀರಕಂಭ, ಕೆ. ಎಂ. ರಫೀಕ್ ಸರ್ಕಲ್ ಇನ್ಸ್‌ಪೆಕ್ಟರ್ ಬೆಂಗಳೂರು, ಸತ್ಯಸುಂದರ ಭಟ್ ಕಲ್ಮಲೆ ಪ್ರಗತಿಪರ ಕೃಷಿಕರು, ಯುವರಾಜ್ ನೆಕ್ಕಿಲಾರು ಮ್ಹಾಲಕರು, ವರಾಹ ಎಂಟರ್ ಪ್ರೈಸಸ್ ಪೂರ್ಲಿಪ್ಪಾಡಿ ಕಲ್ಲಡ್ಕ , ಪ್ರತಿಮಾ ವೈ. ವಿ. ಶಿಕ್ಷಣ ಸಂಯೋಜಕರು, ಬಂಟ್ವಾಳ, ಜ್ಯೋತಿ ಡಿ. ಸಮೂಹ ಸಂಪನ್ಮೂಲ ವ್ಯಕ್ತಿ, ಕಲ್ಲಡ್ಕ , ಗೋಲ್ಡ್‌ ಸ್ಟಾರ್‍ ಹಮೀದ್ ಉಪಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ, ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷರು ಮತ್ತು ಸದಸ್ಯರು ಹಳೆ ವಿದ್ಯಾರ್ಥಿ ಸಂಘ, ಜಯಂತಿ ಅಧ್ಯಕ್ಷರು ಮತ್ತು ಸದಸ್ಯರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಬಿ. ತಿಮ್ಮಪ್ಪ ನಾಯ್ಕ ಶಾಲಾ ಮುಖ್ಯ ಶಿಕ್ಷಕರು, ಮಹಮ್ಮದ್ ಸವಾದ್ ವಿದ್ಯಾರ್ಥಿ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಡಿ. ಪದ್ಮನಾಭ ರಾವ್ ಕೆಲಿಂಜ ಹಾಗೂ ಅಡುಗೆ ಸಿಬ್ಬಂದಿಗಳಾದ ಲಲಿತಾ, ಚಂದ್ರಾವತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಶಿಕ್ಷಕ ಬಿ ತಿಮ್ಮಪ್ಪ ನಾಯ್ಕ ಸ್ವಾಗತಿಸಿ ಧನ್ಯವಾದವಿತ್ತರು. ಶಿಕ್ಷಕಿ ನಳಿನಾಕ್ಷಿ ವರದಿ ವಾಚಿಸಿ, ಶಿಕ್ಷಕಿಯರಾದ ಕಿಶೋರಿ ಅಶ್ವಿತಾ ಮತ್ತು ರೋಶಣಿ ಬಹುಮಾನ ಪಟ್ಟಿ ವಾಚಿಸಿದರು. ಶಿಕ್ಷಕಿ ಪ್ರಣಿತ ಸನ್ಮಾನ ಪತ್ರ ವಾಚಿಸಿ, ಶಿಕ್ಷಕಿ ಉಷಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ಬಳಿಕ ಪುಣಚ ಚೆಂಡೆ ವಾದನ ತಂಡದಿಂದ ಆಕರ್ಷಣೀಯ ಚೆಂಡೆ ಕುಣಿತ ನಡೆದು ಬಳಿಕ ವಿದ್ಯಾರ್ಥಿಗಳಿಂದ “ಬದ್ಕ್ಯೆರೆ ಕಲ್ಪುಲೆ” ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.

- Advertisement -

Related news

error: Content is protected !!