Tuesday, July 8, 2025
spot_imgspot_img
spot_imgspot_img

ಕೆಮ್ಮಣ್ಣು: ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 36ನೇ ವರ್ಷದ ಸಾರ್ವಜನಿಕ ಕಾರ್ಯಕ್ರಮ

- Advertisement -
- Advertisement -

ಕೆಮ್ಮಣ್ಣು: ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 36ನೇ ವರ್ಷದ ಸಾರ್ವಜನಿಕ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ನಿಟ್ಟೆ ಇಲ್ಲಿ ನಡೆಯಿತು.

ವಿವಿಧ ವಯೋಮಾನದವರಿಗೆ ನಾನಾ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಮುದ್ದು ಕೃಷ್ಣ ಸ್ಪರ್ಧೆ ನಡೆದಿದ್ದು, ಸರ್ವರ ಮನಸೂರೆಗೊಂಡಿತು. ಮುಂಬೈ ಉದ್ಯಮಿ ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ, ಗುರ್ಮೆದಬೈಲು, ಕಲ್ಯಾ ಇವರು ವಿವಿಧ ಸ್ಪರ್ಧೆಗಳ ಪ್ರಾಯೋಜಕರಾಗಿ ಸಹಕರಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾತೃ ಸಂಸ್ಥೆ ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷ ರೊI ಕೆ.ಸತೀಶ್ ಕುಮಾರ್ ವಹಿಸಿದ್ದರು. ಜ್ಯೋತಿಷಿ ವಿದ್ವಾನ್ ಪ್ರಸನ್ನ ಆಚಾರ್ಯ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3182 ವಲಯ 5 ಇದರ ಸಹಾಯಕ ಗವರ್ನರ್ ರೊI ಅನಿಲ್ ಡೇಸಾ, ರೈತಬಂಧು ರೈತ ಮಿತ್ರ – 3182 ಇದರ ಜಿಲ್ಲಾ ಚಯರ್ ಮ್ಯಾನ್ ರೊI ಸೂರ್ಯಕಾಂತ್ ಶೆಟ್ಟಿ, RCCಯ ಪೂರ್ವ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕುಮಾರ್, ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿ ಹಾಗೂ RCC ಕ್ರೀಡಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ರೋಟರಿ ಕ್ಲಬ್, ನಿಟ್ಟೆ ಇದರ ಕಾರ್ಯದರ್ಶಿ ರೊI ಡಾ.ರಘುನಂದನ್ ರಾವ್ ಕೆ., RCC ಸಭಾಪತಿ ರೊI ಕೆ.ಅನಿಲ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಗ್ರೆಟ್ಟಾ ರೆಬೆಲ್ಲೋ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ SSLC ಹಾಗೂ PUCಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸ್ಥಳೀಯರಾದ ಕುಮಾರಿ ಸೌಮ್ಯಾ ಮತ್ತು ಅನೀಶ್ ರವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಲ್ವರನ್ನು ಗೌರವಿಸಲಾಯಿತು. ಕೃಷಿ ಕ್ಷೇತ್ರದ ಸಾಧಕ ರಾಜು ಶೆಟ್ಟಿ, ತುಕ್ರಬೆಟ್ಟು, ನಿಟ್ಟೆ ರುಕ್ಮಿಣಿ ಅಡ್ಯಂತಾಯ ಪಾಲಿಟೆಕ್ನಿಕ್ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಸ್ಥಳೀಯ ಪವರ್ ಮೆನ್ ಫಯಾಜ್ ಹಾಗೂ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ (ರಿ.), ಅಬ್ಬನಡ್ಕ ಇದರ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು ಇವರನ್ನು ಗೌರವಿಸಲಾಯಿತು. ಅದೇ ರೀತಿ ಪ್ರತಿಷ್ಟಿತ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇದರ ಹಾಲೀ ಅಧ್ಯಕ್ಷ, ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಕುಮಾರ್ ಕೆ. ಇತ್ತೀಚೆಗೆ ಡಾಕ್ಟರೇಟ್(ಪಿಎಚ್ ಡಿ) ಪಡೆದ ಹಿನ್ನಲೆಯಲ್ಲಿ ಪತ್ನಿ ಡಾ. ಚೇತನಾರವರೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ರೋಟರಿ ಸಮುದಾಯ ದಳದ ಅಧ್ಯಕ್ಷ ರಾಜೇಶ್ ಕುಲಾಲ್ ಸ್ವಾಗತಿಸಿದರು. ಪ್ರಶಾಂತ್ ಕೋಟ್ಯಾನ್ ಅತಿಥಿ ಪರಿಚಯಗೈದರು. ರೊI ಡಾ. ದಿಲೀಪ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಪ್ರಕಾಶ್ ಸಾಲ್ಯಾನ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಾನಂದ್ ರಾವ್ ವಂದಿಸಿದರು. ಪೂರ್ವಾಧ್ಯಕ್ಷ ಶ್ರೀ ಸತೀಶ್ ಶೆಟ್ಟಿ ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ದಳದ ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ಹಾಗೂ ಶ್ರೀ ವಿಠಲ ಆಚಾರ್ಯ ಸಹಕರಿಸಿದರು.

- Advertisement -

Related news

error: Content is protected !!