Friday, April 26, 2024
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೊನೆ ಮುಹೂರ್ತ; ಜ6 ರಿಂದ ಜ.8 ವರ್ಷಾವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -
suvarna gold


ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.೬ರಿಂದ ೮ರ ವರೆಗೆ ನಡೆಯಲಿರುವ ವರ್ಷಾವದಿ ಜಾತ್ರೋತ್ಸವದ ಪ್ರಯುಕ್ತ ಡಿ.೩೧ರಂದು ಬೆಳಗ್ಗೆ ಗೊನೆ ಮುಹೂರ್ತ ನಡೆಯಿತು.‌ ದೇವಾಲಯದ ಪ್ರಧಾನ ಅರ್ಚಕರಾದ ಕೆ. ಗೋವಿಂದ ಜೋಯಿಸರವರು ವಿಧಿವಿಧಾನ ನೆರವೇರಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡ, ಪಿ. ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು, ರಮೇಶ್ ಭಟ್ ಬಂಡಾರಮನೆ, ಪ್ರಪುಲ್ಲ ಚಂದ್ರ ಪಿ.ಜಿ. ಕೋಲ್ಪೆ, ವ್ಯವಸ್ಥಾಪನಾ ಸಮಿತಿ ಸದಸ್ಯ ವಿಜಯಕುಮಾರ ಗೌಡ ಸೂರ್ಯ,ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ವಿ.ಕೆ.ಕುಟ್ಟಿ ಉರಿಮಜಲು, ಉಷಾ ಮುಂಡ್ರಬೈಲು,‌ ಶಶಿಪ್ರಭಾ ಮಿತ್ತೂರು, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಸದಸ್ಯರಾದ ಪುರುಷೋತ್ತಮ ಕೋಲ್ಪೆ, ಸಂಜೀವ ಪೂಜಾರಿ ದರ್ಬೆ, ಗ್ರಾಮಸ್ಥರಾದ ಶಶಿಧರ ಭಂಡಾರಿ, ಜಗದೀಶ್ ದೇವಸ್ಯ, , ಸುರೇಶ್ ದಾಸ್ ನೇರ್ಲಾಜೆ, ರಾಘವ ಉರಿಮಜಲು, ಶಶಿಧರ ಭಂಡಾರಿ ಸೂರ್ಯ, ಸುರೇಶ್ ಸೂರ್ಯ, ತಿಮ್ಮಪ್ಪ ಸಪಲ್ಯ ದೇವಸ್ಯ, ಕೃಷ್ಣಪ್ಪ ಕೆಮನಾಜೆ, ರಾಘವ ಗೌಡ ಉರಿಮಜಲು ಮೊದಲಾದವರು ಉಪಸ್ಥಿತರಿದ್ದರು.

ಜ.೫ ರಂದು ಬೆಳಗ್ಗೆ ಉಗ್ರಾಣ ಮುಹೂರ್ತದೊಂದಿಗೆ ಜಾತ್ರೋತ್ಸವವು ಆರಂಭಗೊಳ್ಳಲಿದೆಮ ಜ.೬ರಂದು ೧೦೮ ತೆಂಗಿನಕಾಯಿ ಗಣಪತಿ ಹವನ ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ. ಜ.7ರಂದು ಬೆಳಗ್ಗೆ 6ಗಂಟೆಯಿಂದ ಸಾಯಂಕಾಲ 6ಗಂಟೆಯ ವರೆಗೆ ಅರ್ಧ ಏಕಾಹ ಭಜನೆ, ಆಶ್ಲೇಶ ಬಲಿ, ತುಲಾಭಾರಸೇವೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಪಂಚಮಿ ಬಲಿ ಉತ್ಸವ, ವಸಂತಕಟ್ಟೆಪೂಜೆ ನಡೆಯಲಿದೆ. ಜ.8ರಂದು ಕಿರುಷಷ್ಠಿ ಉತ್ಸವ, ದೇವರ ದರ್ಶಣ ಬಲಿ, ಬಟ್ಟಲುಕಾಣಿಕೆ, ಸ್ಥಳದೈವ ಪಿಲಿಚಾಮುಂಡಿ ನೇಮೋತ್ಸವದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

vtv vitla
suvarna gold
- Advertisement -

Related news

error: Content is protected !!