- Advertisement -
- Advertisement -
ಕೇಪು:-ಕೊರೊನಾ ಮಾಹಮಾರಿಯಿಂದ ಇಡೀ ಜಗತ್ತೇ ತತ್ತರಿಸಿದೆ, ಇದಕ್ಕೆ ನಮ್ಮ ಜಿಲ್ಲೆಯು ಹೊರತಾಗಿಲ್ಲ..ನಮ್ಮ ಜಿಲ್ಲೆಯಲ್ಲಿಯು ‘ಲಾಕ್ ಡೌನ್‘ ಘೋಷಣೆಯಾಗಿದ್ದು ಎಲ್ಲಾ ಜನರು ತನ್ನ ಕೆಲಸ ಕಾರ್ಯವನ್ನು ಬಿಟ್ಟು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಬಂಟ್ವಾಳ ತಾಲೂಕಿನ ಪುಣಚ ವಲಯದ ಹಿಂದೂ ಜಾಗರಣ ವೇದಿಕೆ ಕಲ್ಲಂಗಳ-ಕೇಪು.. ಸಂಘಟನೆಯ ಕಾರ್ಯಕರ್ತರು ಇಂದು “ಸಾಮಾಜಿಕ ಅಂತರ” ಕಾಯಿದುಕೊಂಡು ಕಲ್ಲಂಗಳ ಶಾಲಾ ಬಳಿ 130 ವೃಕ್ಷ ನೆಡುವ ಮೂಲಕ “ವೃಕ್ಷ ಜಾಗರಣ ಕಾರ್ಯ” ಮಾಡಿದರು.
ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯಿತು.
- Advertisement -