Friday, June 19, 2026
spot_imgspot_img
spot_imgspot_img

ಕೇಪು ಗ್ರಾಮದ ಕುಕ್ಕೆಬೆಟ್ಟು ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

- Advertisement -
- Advertisement -

ಕೇಪು ಗ್ರಾಮದ ಕುಕ್ಕೆಬೆಟ್ಟು ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಕುಕ್ಕೆಬೆಟ್ಟುವಿನಲ್ಲಿ ನೆರವೇರಿತು. ಈ ಅನುದಾನವು ಮಂಗಳೂರು ಸಂಸದರಾದ ಶ್ರೀ ಬ್ರಿಜೇಶ್ ಚೌಟ ರ ಶಿಫಾರಸ್ಸಿನ ಮೇರೆಗೆ MRPL ನ ಅನುದಾನ CRS ಫಂಡ್ ನಲ್ಲಿ ನಿರ್ಮಾಣಗೊಳ್ಳಲಿದೆ.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಾರದಾ, ಮೇಲ್ವಿಚಾರಕಿ ಸುಮನಾ ಕೇಪು ಗ್ರಾಮ ಪಂಚಾಯತು ಕಾರ್ಯದರ್ಶಿ ಶ್ರೀ ರಾಮ ನಾಯ್ಕ, ಬಂಟ್ವಾಳ ತಾಲ್ಲೂಕುಪಂಚಾಯತ್ ಮಾಜಿ ಸದಸ್ಯರಾದ ಹರಿಪ್ರಸಾದ್ ಯಾದವ್, ಕೇಪು ಪಂಚಾಯತ್ ಮಾಜಿ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ, ಪುರುಷೋತಮ ಗೌಡ, ಶ್ರೀಮತಿ ಮೋಹಿನಿ, ನಳಿನಿ, ಸುಗುಣ ಮತ್ತು ಸ್ಥಳೀಯ ರಾದ ಸೀತಾರಾಮ ಶೆಟ್ಟಿ ವಿಠಲ ಶೆಟ್ಟಿ, ರಮೇಶ ಆಳ್ವ, ಸತೀಶ್ ರೋಹಿತಾಕ್ಷ, ಗಂಗಾಧರ, ರಘುವೀರ ಆಚಾರ್ಯ, ಬಾಲವಿಕಾಸ ಸಮಿತಿ ಸದಸ್ಯರು, ಶ್ರೀ ಶಕ್ತಿ ಸದಸ್ಯರು, ಪುಟಾಣಿಗಳು,ಪೋಷಕರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ಮೀನಾಕ್ಷಿ ಸ್ವಾಗತಿಸಿ, ಶ್ರೀ ತಾರಾನಾಥ ಆಳ್ವ ಧನ್ಯವಾದ ನೀಡಿದರು.ಅಂಗನವಾಡಿ ಸಹಾಯಕಿ ಗೀತಂಜಲಿ ಗುತ್ತಿಗೆದಾರ ರಾದ ಹರಿಪ್ರಸಾದ್ ಸಹಕರಿಸಿದರು.

- Advertisement -

Related news

error: Content is protected !!