Monday, May 6, 2024
spot_imgspot_img
spot_imgspot_img

ನಕಲಿ ಕಲಾಕೃತಿಗಳ ಮಾರಾಟ; ಕೋಟ್ಯಾಂತರ ರೂ. ವಂಚನೆ ಆರೋಪದಲ್ಲಿ ಕೇರಳ ಮೂಲದ ಯೂಟ್ಯೂಬರ್ ಬಂಧನ!

- Advertisement -G L Acharya panikkar
- Advertisement -

ಕೇರಳ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಕೇರಳ ಮೂಲದ ಯೂಟ್ಯೂಬರ್ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಯೂಟ್ಯೂಬರ್ ಮೋನ್ಸನ್ ಮಾವುಂಗಲ್​ (52) ಎನ್ನಲಾಗಿದೆ.

ಕೇರಳ ಮೂಲಕ ಯೂಟ್ಯೂಬರ್ ಮಾವುಂಕಲ್, ಕಳೆದ ಹಲವು ವರ್ಷಗಳಿಂದ ಕಲಾಕೃತಿಗಳ ಮತ್ತು ಪುರಾತನ ವಸ್ತುಗಳ ಸಂಗ್ರಹಿಸುತ್ತಿದ್ದಂತೆ ನಟಿಸುತ್ತ ಜನರಿಗೆ 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಪ್ಪು ಸುಲ್ತಾನ ಸಿಂಹಾಸನ, ಔರಂಗಜೇಬನ ಉಂಗುರ ಸೇರಿದಂತೆ ಇತರ ಅಪರೂಪದ ಕಲಾಕೃತಿಗಳು ತನ್ನ ಬಳಿ ಇದೆ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದರು. ಇದರಿಂದ ಜನರಿಗೆ ಮೋಸ ಮಾಡಿ ಹಣವನ್ನು ವಂಚಿಸಿದ್ದರು.

ಗಲ್ಫ್ ದೇಶಗಳಲ್ಲಿ ತಾವು ಮಾರಿದ ಕಲಾಕೃತಿಗಳಿಗೆ ನೀಡಿದ ಹಣ ಬ್ಯಾಂಕ್​ನಲ್ಲಿದೆ, ವಿದೇಶಿ ಬ್ಯಾಂಕ್ ಖಾತೆಯಲ್ಲಿ ಸಿಲುಕೊಂಡಿವೆ ಎಂದು ಜನರನ್ನು ನಂಬಿಸಿದ್ದರು. ಕೊಚ್ಚಿಯಲ್ಲಿರುವ ಯೂಟ್ಯೂಬರ್ ಬಾಡಿಗೆ ಮನೆಯಲ್ಲಿ ಅವರ ಬಳಿಯಿದ್ದ ಬಹುತೇಕ ಕಲಾಕೃತಿಗಳು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ನಕಲಿ ಉತ್ಪನ್ನಗಳು ಎಂಬ ವಿಷಯ ಬೆಳಕಿಗೆ ಬಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಮೋನ್ಸನ್ ಮಾವುಂಗಲ್ ರಾಜಕೀಯ, ಸಿನಿಮಾ ಕ್ಷೇತ್ರ ಹೀಗೆ ಅನೇಕ ಜನರ ಸಂಪರ್ಕ ಹೊಂದಿದ್ದರು. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಯೂಟ್ಯೂಬರ್ ಜನರ ಬಳಿ ಹೋಗಲು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಬಳಸಿಕೊಳ್ಳುತ್ತಿದ್ದರು.

- Advertisement -

Related news

error: Content is protected !!