Thursday, May 16, 2024
spot_imgspot_img
spot_imgspot_img

ಕೇರಳ: ನವವಿವಾಹಿತೆ ರಸ್ತೆ ಅಪಘಾತದಲ್ಲಿ ಮೃತ್ಯು

- Advertisement -G L Acharya panikkar
- Advertisement -

ಕೇರಳ: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್​​ನ ಕುರುಡಿಕಾಡ್ ಎಂಬಲ್ಲಿ ನಡೆದಿದೆ.

ಅನಿಶಾ(20) ಮೃತ ದುರ್ದೈವಿ. ಇವರು ಪುಥುಕೋಡ್​ನ ಕಣ್ಣನ್ನೂರ್​ ಮೂಲದವರು. ಕೊಯಮತ್ತೂರು ಮೂಲದ ಆಕೆಯ ಪತಿ ಶಾಕಿರ್​ (32) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅನಿಶಾ ಮತ್ತು ಶಾಕೀರ್​ ಇದ್ದ ಬೈಕ್​ ಪಲಕ್ಕಾಡ್​ನಿಂದ ಕೊಯಮತ್ತೂರಿಗೆ ತೆರಳಿತ್ತು. ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಅನಿಶಾ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್​ ಓಡಿಸುತ್ತಿದ್ದ ಶಾಕೀರ್​ಗೆ ಗಂಭೀರ ಗಾಯವಾಗಿದೆ. ಅನಿಶಾ ಮತ್ತು ಶಾಕೀರ್ ಗೆ​ ಕಳೆದ ಜೂನ್​ 4ರಂದು ಮದುವೆಯಾಗಿದ್ದು, ವಿವಾಹವಾದ ಒಂದೇ ತಿಂಗಳಲ್ಲಿ ಅನಿಶಾ ದಾರುಣ ಸಾವಿಗೀಡಾಗಿದ್ದಾಳೆ.

- Advertisement -

Related news

error: Content is protected !!