Monday, June 22, 2026
spot_imgspot_img
spot_imgspot_img

ಅಬ್ದುಲ್ ಅಜೀಜ್ ಸುಳಿವು ಮಾಹಿತಿಗೆ ಎರಡು ಲಕ್ಷ ಘೋಷಿಸಿದ ಕೇರಳ ಪೋಲೀಸ್ ಮಹಾನಿರ್ದೇಶಕರು

- Advertisement -
- Advertisement -

ಸುಳ್ಯ: ಸುಳ್ಯದಲ್ಲಿ ಪರಾರಿಯಾಗಿದ್ದ ಆರೋಪಿಯೋರ್ವನ ಬಗ್ಗೆ ಮಾಹಿತಿ ನೀಡುವವರಿಗೆ ಕೇರಳದ ಪೊಲೀಸ್ ಮಹಾನಿರ್ದೇಶಕರು ಎರಡು ಲಕ್ಷ ಬಹುಮಾನ ಘೋಷಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮತ್ತು ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಬ್ದುಲ್ ಅಜೀಜ್ (33) ಎಂಬ ಕುಖ್ಯಾತ ಆರೋಪಿಯು ಸುಳ್ಯದಲ್ಲಿ ಪರಾರಿಯಾಗಿದ್ದ.

ಸೆಪ್ಟೆಂಬರ್ 14ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿಈತ ಪೊಲೀಸರಿಂದ ತಪ್ಪಿಸಿಕೊಂಡಿದ್ದು. ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ ರೂ.2ಲಕ್ಷ ನಗದು ಬಹುಮಾನವನ್ನು ನೀಡುವುದಾಗಿ ಕೇರಳ ಪೊಲೀಸ್ ಮಹಾ ನಿರ್ದೇಶಕರು ಘೋಷಿಸಿದ್ದಾರೆ ಎಂಬುದಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!