Monday, May 20, 2024
spot_imgspot_img
spot_imgspot_img

ರಸ್ತೆ ಪಕ್ಕದಲ್ಲಿ ನಿಂಬೇಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಈಗ ಪೊಲೀಸ್ ಇನ್ಸ್​​ಪೆಕ್ಟರ್!

- Advertisement -G L Acharya panikkar
- Advertisement -

ತಿರುವನಂತಪುರಂ: ರಸ್ತೆ ಪಕ್ಕದಲ್ಲಿ ನಿಂಬೇಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಈಗ ಕೇರಳದಲ್ಲಿ ಪೊಲೀಸ್ ಅಧಿಕಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿಕ್ಕ ವಯಸ್ಸಿನವರಿದ್ದಾಗಲೇ ಆನ್ಯಿ ಶಿವಾಳ ಅವರಿಗೆ ಮದುವೆಯಾಗಿ ಅವರಿಗೊಂದು ಮಗು ಹುಟ್ಟಿತ್ತು. ಗಂಡನಾದವನು ಅವರನ್ನು ನಡುಬೀದಿಯಲ್ಲಿ ಬಿಟ್ಟುಹೋಗಿದ್ದನು. ತನ್ನ ಗಂಡನಿಂದ ದೂರವಾಗಿ ತಮ್ಮ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ಆಗ ಜೀವನ ನಿರ್ವಹಣೆಗಾಗಿ ನಿಂಬೇಹಣ್ಣಿನ ಜ್ಯೂಸ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಇದೇ ಮಹಿಳೆ 31 ವರ್ಷಕ್ಕೆ ತನ್ನ ಕನಸ್ಸನ್ನು ನನಸು ಮಾಡಿಕೊಂಡಿದ್ದಾಳೆ. ಈಗ ಕೇರಳದ ವೆರಕಾಲ್ ಪೊಲೀಸ್ ಠಾಣೆಯಲ್ಲಿ ಎಸ್‍ಐ ಆಗಿದ್ದಾರೆ.

12 ವರ್ಷಗಳ ಹಿಂದೆ ಅಂದು ವಾರ್ಕಳ ಶಿವಗಿರಿ ಆಶ್ರಮದಲ್ಲಿ ನಿಂಬೇಹಣ್ಣಿನ ಜ್ಯೂಸ್, ಐಸ್‍ಕ್ರೀಮ್, ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದ ಆನ್ಯಿ ಅವರಿಗೆ ಒಬ್ಬರು ದಾರಿ ತೋರಿದ್ದರು. ಆಕೆಗೆ ಒಂದಷ್ಟು ಹಣ ನೀಡುತ್ತಾ ಪೊಲೀಸ್ ಇಲಾಖೆ ಮತ್ತು ಹೆಂಗಸೊಬ್ಬರು ಸಹಾಯ ಮಾಡಿದ್ದರು. ಆನ್ಯಿ ನೀನು ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಪರೀಕ್ಷೆ ಬರೆಯಬೇಕಮ್ಮಾ, ನಿನ್ನ ಜೀವನವನ್ನು ದಿಟ್ಟವಾಗಿ ಎದುರಿಸಬೇಕು ಎಂದರೆ ನೀನೊಬ್ಬ ಪೊಲೀಸ್ ಅಧಿಕಾರಿ ಆಗಬೇಕಮ್ಮಾ ಅಂದಿದ್ದರು.

2016ರಲ್ಲಿ ಸಬ್ ಇನ್ಸ್​​ಪೆಕ್ಟರ್ ಎಕ್ಸಾಂ ಬರೆದಿದ್ದಾರೆ. ಲೋನ್ ಮಾಡಿಕೊಂಡು ಎಕ್ಸಾಂಗೆ ಬೇಕಾಗುವ ಎಲ್ಲಾ ತಯಾರಿಯನ್ನು ಮಾಡಿಕೊಂಡು ಎಕ್ಸಾಂ ಬರೆದಿದ್ದಾರೆ. ನಂತರ ಒಂದೂವರೆ ವರ್ಷದ ನಂತರ ಟ್ರೈನಿಂಗ್ ಮುಗಿಸಿ ಕೇರಳದ ವೆರಕಾಲ್‍ದಲ್ಲಿ ಎಸ್‍ಐ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಮಗನನ್ನು ಮಡಿಲಲ್ಲಿ ಹಿಡಿದು, ಕಾಣದ ಗುರಿಯತ್ತ ಹೆಜ್ಜೆಹಾಕುತ್ತಾ 12 ವರ್ಷ ಸಾಗಿ ಬಂದ ಆನ್ಯಿ ಶಿವಾಳ ಸಾಧನೆ ಇತರರಿಗೆ ಪ್ರೇರಣಾದಾಯಕವಾಗಿದೆ. ಆನ್ಯಿ ಶಿವಾಳ ಸಾಧನೆ ಅಮೋಘ ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಭ ಕೋರಿದ್ದಾರೆ.

- Advertisement -

Related news

error: Content is protected !!