Saturday, April 27, 2024
spot_imgspot_img
spot_imgspot_img

“ಕೆಜಿಎಫ್ ಚಾಪ್ಟರ್ 2” ಟೀಸರ್ ರಿಲೀಸ್ ಗೆ ಡೇಟ್ ಫಿಕ್ಸ್

- Advertisement -G L Acharya panikkar
- Advertisement -

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತ ದೇಶವೇ ಕಳೆದೆರಡು ವರ್ಷಗಳಿಂದ ಕಾಯುತ್ತಿರುವ ದಿನಕ್ಕೆ, ಇಂದಿನಿಂದ ಕ್ಷಣಗಣನೆ ಆರಂಭವಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರನ್ನು ನ್ಯಾಷನಲ್ ಸ್ಟಾರನ್ನಾಗಿ ಬದಲಾಯಿಸಿದ್ದ “ಕೆಜಿಎಫ್” ಸಿನೆಮಾದ ದ್ವಿತೀಯ ಅಧ್ಯಾಯದ ಮೊದಲ ನೋಟ, ಜನವರಿ 8ಕ್ಕೆ ಅನಾವರಣಗೊಳ್ಳಲಿದೆ ಎಂಬುದನ್ನು “ಕೆಜಿಎಫ್ ಚಾಪ್ಟರ್ 2” ಚಿತ್ರತಂಡ ಇಂದು ಹೊಚ್ಚ ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ.

ಟೀಸರ್ ಘೋಷಣೆಯ ಪೋಸ್ಟರ್‌ನಲ್ಲಿ ರಾಖಿ ಭಾಯ್ ಕೆಜಿಎಫ್ ಸಾಮ್ಯಾಜ್ಯದ ಸಾಮ್ರಾಟನಾಗಿ ವೀರಾಜಮಾನರಾಗಿದ್ದು.ನೋಡುಗರ ಕಣ್ಮನ ಸೆಳೆಯುವಂತಿದೆ. ಜೊತೆಗೆ ರಾಕಿಂಗ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಚಿತ್ರದ ಅಪ್‌ಡೇಟ್‌ಗಾಗಿ ಸುದೀರ್ಘ ಸಮಯ ಕಾದು. ಇಂದು ಸಿಹಿ ಸುದ್ದಿ ಸಿಕ್ಕಿರುವುದಕ್ಕೆ ಹಬ್ಬದ ರೀತಿ ಸಂಭ್ರಮ ಪಡುತ್ತಿದ್ದಾರೆ.

ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಜನುಮದಿನವಾಗಿದ್ದು “ಕೆಜಿಎಫ್ ಚಾಪ್ಟರ್ 2” ಟೀಸರ್ ಯಾರೂ ಕೂಡ ಊಹಿಸದ ರೀತಿಯಲ್ಲಿ ಮೂಡಿ ಬರಲಿದೆ. ಜೊತೆಗೆ ವಿಶ್ವ ಸಿನಿರಂಗವನ್ನೇ ನಿಬ್ಬೆರಗಾಗಿಸಲಿದೆ ಎಂದು ಸಿನಿ ಪಂಡಿತರು ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Related news

error: Content is protected !!