- Advertisement -
- Advertisement -
ಮಂಗಳೂರು:-ಮಾಜಿ ವಿಧಾನ ಪರಿಷತ್ ಸದಸ್ಯ,ಕಾಂಗ್ರೇಸ್ ಮುಖಂಡ ಐವಾನ್ ಡಿಸೋಜಾಗೆ ಕೊರೋನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಅವರ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.ನಿನ್ನೆ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದರಿಂದ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದ ಖಾದರ್ ಇಂದಿನಿಂದ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.
ಕಳೆದ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದಾಗ, ಐವಾನ್ ಡಿಸೋಜಾ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೇಸ್ ನಾಯಕರು,ಕಾರ್ಯಕರ್ತರು ಜೊತೆಗಿದ್ದರು.ಇದೀಗ ಐವಾನ್ ಗೆ ಪಾಸಿಟಿವ್ ಆಗಿರೋ ಹಿನ್ನಲೆಯಲ್ಲಿ ಅವರ ಜೊತೆಗೆ ಸಂಪರ್ಕದಲ್ಲಿದ್ದವರು ಕೊರೋನಾ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷಿಸಲು ಖಾದರ್ ಮನವಿ ಮಾಡಿದ್ದಾರೆ.
- Advertisement -