Sunday, June 14, 2026
spot_imgspot_img
spot_imgspot_img

ಬಂಟ್ವಾಳ : ಮನೆಮಂದಿ ಯಾರೂ ಇಲ್ಲದ ವೇಳೆ ನಗ-ನಗದು ಕಳವುಗೈದ ಖದೀಮರು

- Advertisement -
- Advertisement -

ಬಂಟ್ವಾಳ : ಮನೆಮಂದಿ ಯಾರೂ ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ನಗ-ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕು ಅಮರ ಪ್ರಿಂಟರ್ಸ್ ರಸ್ತೆ ಕಾರಂತ ಕೋಡಿ, ಬಿ ಮೂಡ ಗ್ರಾಮದಲ್ಲಿ ನಡೆದಿದೆ.

ಸಿ ಶ್ರೀಧರ ಎಂಬವರು ತನ್ನ ಮನೆಯವರೊಂದಿಗೆ ದಿನಾಂಕ 17-06-2024 ರಂದು ಸಂಜೆ ಮಗಳ ಮನೆಗೆ ತೆರಳಿದ್ದು, ದಿನಾಂಕ 18-06-2024 ರಂದು ಬೆಳಿಗ್ಗೆ ಮನೆಗೆ ಹಿಂತಿರುಗುವಾಗ ಮನೆಯ ಬಾಗಿಲು ಮುರಿದಿರುವ ಬಗ್ಗೆ ಮಾಹಿತಿ ಬಂದಿದ್ದು, ಶ್ರೀಧರ ರವರು ಮನೆಗೆ ಹೋಗಿ ನೋಡಲಾಗಿ ಜಗಲಿಯಲ್ಲಿ ಒಂದು ಹಾರೆ ಇದ್ದು, ಮನೆಯ ಬಾಗಿಲಿನ ಬೀಗ ತೆಗೆದು ಒಳಗೆ ಹೋದಾಗ ಕಪಾಟನಲ್ಲಿ ಇಟ್ಟಿದ್ದ ಬಟ್ಟೆ ಚೆಲ್ಲಾ ಪಿಲ್ಲಿಯಾಗಿದ್ದು ಅದರಲ್ಲಿ ಇಟ್ಟಿರುವ ರೂ 30,000/- ಹಣ, 4 ಗ್ರಾಂ ಚಿನ್ನದ ಆಭರಣ (ಅಂದಾಜು ಮೌಲ್ಯ 20000/- ರೂ) ಹಾಗೂ ಅಂದಾಜು 2000/- ರೂ ಮೌಲ್ಯದ ಬೆಳ್ಳಿಯ ಆಭರಣ ಕಳುವಾಗಿರುವುದು ಕಂಡು ಬರುತ್ತದೆ ಈ ಬಗ್ಗೆ , ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 106/2024 ಕಲಂ: 454, 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!