Sunday, May 19, 2024
spot_imgspot_img
spot_imgspot_img

KIC ರಾಷ್ಟ್ರೀಯ ಸಮಿತಿ ರೂಪೀಕರಣ ಸಭೆ‌; ಸೌದಿ ಅರೇಬಿಯಾ ನೂತನ ರಾಷ್ಟ್ರೀಯ ಸಮಿತಿ ಆಸ್ತಿತ್ವಕ್ಕೆ!

- Advertisement -G L Acharya panikkar
- Advertisement -
driving

ಜುಬೈಲ್: ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಧಾರ್ಮಿಕ ಮತ್ತು ಲೌಕಿಕ ವಿದ್ಯಾಸಂಸ್ಥೆಯಾದ ಕೆಐಸಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ರೂಪೀಕರಣ ಸಭೆಯು ಜುಬೈಲ್ ನ ಕುಕ್ ಝೋನ್ ಹೋಟೆಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕೆಐಸಿ ಜುಬೈಲ್ ಸಮಿತಿಯ ಸಲಹಾ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಅರೆಮಾಕ್ಸ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು ಹಾಗೂ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕೆಐಸಿ ಜುಬೈಲ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮರಕ್ಕಿಣಿ ಅವರು ಮಾತನಾಡಿ ಕೆಐಸಿ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದರು. ಕೆಐಸಿ ಜುಬೈಲ್ ಸಮಿತಿಯ ಸಲಹಾ ಸಮಿತಿ ಸದಸ್ಯರಾದ ಸುಲೈಮಾನ್ ಖಾಸಿಮಿ ಬಾಯಾರ್ ಅವರು ನೂತನ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.

ಕೆಐಸಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಮರಕ್ಕಿಣಿ, ಉಪಾಧ್ಯಕ್ಷರಾಗಿ ಬಶೀರ್ ಸವಣೂರು, ಝಕರಿಯಾ ಕೊರಿಂಗಿಲ, ಇರ್ಷಾದ್ ಕುಂಡಡ್ಕ, ಅಮ್ಜಾದ್ ಖಾನ್ ಪೋಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ನೌಶಾದ್ ಪೋಳ್ಯ, ಕೋಶಾಧಿಕಾರಿಯಾಗಿ ಅಶ್ರಫ್ ಮುಕ್ವೆ, ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಕುಕ್ಕುವಳ್ಳಿ, ಸುನೀರ್ ಕೂರ್ನಡ್ಕ, ಅಬ್ದುಲ್ ಹಮೀದ್ ಕಬಕ, ಕಾರ್ಯಾಧ್ಯಕ್ಷರಾಗಿ ಬಶೀರ್ ಅರಂಬೂರು.

ಇಕ್ಬಾಲ್ ಕುಂತೂರು ಸಂಘಟನಾ ಕಾರ್ಯದರ್ಶಿಗಳಾಗಿ ಇಕ್ಬಾಲ್ ಮುಂಡೋಡಿ, ಜಲೀಲ್ ಕೇಕನಾಜೆ, ಲೆಕ್ಕ ಪರಿಶೋಧಕರಾಗಿ ನೌಫಲ್ ಕೂರ್ನಡ್ಕ, ಸಲಹಾ ಸಮಿತಿಯ ಸದಸ್ಯರಾಗಿ ಝಕರಿಯಾ ಜೋಕಟ್ಟೆ (ಅಲ್-ಮುಝೈನ್ ಗ್ರೂಪ್), ಸೈಯದ್ ಅಹಮದ್ ತಂಙಳ್ ಉಪ್ಪಿನಂಗಡಿ, ಸುಲೈಮಾನ್ ಖಾಸಿಮಿ ಬಾಯಾರ್, ಇಸ್ಮಾಯಿಲ್ ಎನ್ ಜಿಸಿ, ಶರೀಫ್, ಹಾರಿಸ್ ಎಸ್ಎ ಪುತ್ತೂರು, ಅಬ್ದುಲ್ ಹಮೀದ್ ಅರೆಮಾಕ್ಸ್, ಫಿರೋಝ್ ಪರ್ಲಡ್ಕ, ಫಾರೂಖ್ ಕನ್ಯಾನ, ರಝಾಕ್ ಮಂಡೆಕೋಲು, ಅಹಮದ್ ರಫೀಕ್ ಮಂಗಳೂರು.

ಕೆಐಸಿ ಸೌದಿ ಅರೇಬಿಯಾ ಅಂತರಾಷ್ಟ್ರೀಯ ಉಸ್ತುವಾರಿಗಳಾಗಿ ಇಸ್ಮಾಯಿಲ್ ಕೂರ್ನಡ್ಕ, ತಾಹಿರ್ ಸಾಲ್ಮರ, ಆಸಿಫ್ ಪುತ್ತೂರು, ಮುಸ್ತಫಾ ಗೂನಡ್ಕ, ಮಾಧ್ಯಮ ವಿಭಾಗದ ಉಸ್ತುವಾರಿಗಳಾಗಿ ಅಬಿಝರ್ ಕೂರ್ನಡ್ಕ, ಅನಸ್ ವಿಟ್ಲ ಹಾಗು ಕಾರ್ಯಕಾರಿಣಿ ಸದಸ್ಯರಾಗಿ ನವಾಝ್ ಮುಕ್ವೆ, ಅಬ್ದುಲ್ ಸತ್ತಾರ್ ಪುತ್ತೂರು, ಮೊಹಮ್ಮದ್ ಶಫೀಕ್ ಪುತ್ತೂರು, ನಿಝಾರ್ ಆರಾಂಡ, ಮೊಹಮ್ಮದ್ ರಿಯಾಝ್, ಮೊಹಮ್ಮದ್ ರಿಯಾಝ್, ಮುಷ್ತಾಕ್ ಮೊಹಮ್ಮದ್, ಮೊಹಮ್ಮದ್ ಅಶ್ರಫ್, ಅಬ್ದುಲ್ ಹಮೀದ್ ಕಾಪು, ಅಶ್ರಫ್ ಬೆದ್ರಾಳ ಅವರು ಆಯ್ಕೆಯಾದರು.

ಕೆಐಸಿ ಸಂಸ್ಥೆಯ ಹಿತೈಷಿ ಅಬ್ದುಲ್ ರಹಮಾನ್ ಬಾಖವಿ ಅವರು ದುಆಗೆ ನೇತೃತ್ವ ನೀಡಿದರು ಹಾಗೂ ಕೆಐಸಿ ಜುಬೈಲ್ ಇದರ ಪದಾಧಿಕಾರಿ ಮೊಹಮ್ಮದ್ ನವಾಝ್ ಮುಕ್ವೆ ಅವರು ಸ್ವಾಗತಿಸಿದರು. ಅಶ್ರಫ್ ನೌಶಾದ್ ಪೋಳ್ಯ ಅವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಕೊನೆಯಲ್ಲಿ ತಾಹಿರ್ ಸಾಲ್ಮರ ಅವರು ಧನ್ಯವಾದಗೈದರು.

- Advertisement -

Related news

error: Content is protected !!