Friday, May 3, 2024
spot_imgspot_img
spot_imgspot_img

ಮೀಡಿಯಾ ಹೆಸರಿನಲ್ಲಿ ಹಣಕ್ಕಾಗಿ ಬ್ಲಾಕ್ ಮೇಲ್: ಯುಟ್ಯೂಬ್ ಚಾನೆಲ್ ವರದಿಗಾರ ಸಹಿತ 6 ಜನರಿಗೆ ಜೈಲೂಟ ಫಿಕ್ಸ್!

- Advertisement -G L Acharya panikkar
- Advertisement -

ಬೆಂಗಳೂರು: ಆಹಾರ ತಯಾರಿಕೆ ಸಂಸ್ಥೆಯ ಇಬ್ಬರು ಸಿಬ್ಬಂದಿಗಳನ್ನು ಅಪಹರಣ ಮಾಡಿ 20 ಲಕ್ಷ ರೂ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದ ಯು ಟ್ಯೂಬ್ ಚಾನೆಲ್ ವರದಿಗಾರ ಸಹಿತ ಆರು ಜನ ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಅರೋಪಿಗಳನ್ನು ರೌಡಿ ಶೀಟರ್ ಕುಳ್ಳಿ ರಮೇಶ್, ಯು ಟ್ಯೂಬ್ ಚಾನೆಲ್ ವರದಿಗಾರ ಸಂತೋಷ್, ದುರ್ಗೇಶ, ಹರೀಶ್, ಅರವಿಂದ್ ಹಾಗೂ ವಿವೇಕ್ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಸಾಯಿ ಫುಡ್ ಪ್ರೈ. ಲಿಮಿಟೆಡ್ ಸಿಬ್ಬಂದಿ ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಅದೇ ಕಾರಿನಲ್ಲಿ ಅಪಹರಣ ಮಾಡಿದ್ದು, ಬಿಡಬೇಕಾದರೆ 20 ಲಕ್ಷ ರೂ. ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಇಬ್ಬರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಸಾಯಿ ಫುಡ್‌ನ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿಯುತ್ತಿದಂತೆ ಅಪಹರಣ ಮಾಡಿದ್ದ ಇಬ್ಬರನ್ನು ವಾಹನ ಸಮೇತ ಬಿಟ್ಟು ಪರಾರಿಯಾಗಿದ್ದರು. ಕೆಲ ದಿನಗಳ ಹಿಂದೆ ಯು ಟ್ಯೂಬ್ ಚಾನೆಲ್ ವರದಿಗಾರ ಸಂತೋಷ್ ಮತ್ತು ಟೀಂ ಸಾಯಿ ಫುಡ್ ಪ್ರೈ. ಲಿ. ತಯಾರಿಸುತ್ತಿದ್ದ ಆಹಾರ ಪದಾರ್ಥಗಳ ಗೋಡನ್ ಗೆ ನುಗ್ಗಿತ್ತು. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೀರಾ ಎಂದು ಬೆದರಿಕೆ ಹಾಕಿದ್ದರು. ಹಣ ಕೊಡದಿದ್ದರೆ ನಿಮ್ಮ ಅಕ್ರಮವನ್ನು ಯು ಟ್ಯೂಬ್‌ಗೆ ಹಾಕುವುದಾಗಿ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ್ದರು. ಅವಧಿ ಮುಗಿದ ಆಹಾರ ಪದಾರ್ಥಗಳು ಸಿಗದ ಕಾರಣ ಹಣ ವಸೂಲಿಗೆ ಯತ್ನಿಸಿ ವಾಪಸು ಬಂದಿದ್ದರು. ಈ ಘಟನೆ ನೀಡಿದ ಸುಳಿವಿನ ಮೇರೆಗೆ ಯು ಟ್ಯೂಬ್ ಚಾನೆಲ್ ವರದಿಗಾರನ ಬೆನ್ನಟ್ಟಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಯಿ ಫುಡ್ ಪ್ರೈ. ಲಿಮಿಟೆಡ್ ಮೇಲೆ ಮೀಡಿಯಾ ಹೆಸರು ಹೇಳಿಕೊಂಡು ಮೊದಲು ದಾಳಿ ಮಾಡಿದ್ದಾರೆ. ಅಲ್ಲಿ ಯಾವುದೇ ಅವಧಿ ಮುಗಿದ ಪದಾರ್ಥ ಸಿಗದ ಹಿನ್ನೆಲೆಯಲ್ಲಿ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದರಿಂದ ವಿಫಲಗೊಂಡ ತಂಡ ರೌಡಿ ಕುಳ್ಳಿ ರಮೇಶ್ ಜತೆ ಗೂಡಿ ಎಲ್ಲರೂ ಸಿಬ್ಬಂದಿಯನ್ನು ಅಪಹರಿಸಲು ಪ್ಲಾನ್ ರೂಪಿಸಿದ್ದಾರೆ. ಅದರಂತೆ ವಾಹನದಲ್ಲಿ ಹೋಗುವಾಗ ಅಡ್ಡಗಟ್ಟಿ ಅವರದ್ದೇ ವಾಹನದಲ್ಲಿ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ಈ ಹಿಂದಿನ ಘಟನೆಯ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!