- Advertisement -
- Advertisement -


ಉಡುಪಿ: ಚಾಕು ತೋರಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರಲ್ಲಿದ್ದ 1 ಲ.ರೂ. ಹಣವನ್ನು ದರೋಡೆ ಮಾಡಿ ಜೀವಬೆದರಿಕೆ ಹಾಕಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ.
ಆತ್ರಾಡಿಯ ಮಹಮ್ಮದ್ ನಿಹಾಲ್ ಅವರು ಬಸ್‌ನ ಕಲೆಕ್ಷನ್ ವ್ಯವಹಾರ ಮಾಡಿಕೊಂಡಿದ್ದರು. ಜೂ. 20ರಂದು ಬಸ್‌ನ ಕಲೆಕ್ಷನ್ ನಲ್ಲಿ ಸಿಕ್ಕಿದ ಹಣವನ್ನು ತೆಗೆದುಕೊಂಡು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬೇಕರಿ ಬಳಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ಬಲವಂತವಾಗಿ ಕರೆದೊಯ್ದಿದ್ದಾರೆ. ಅವರನ್ನು ಆ ವ್ಯಕ್ತಿಗಳು ಬಲವಂತವಾಗಿ ಕಾರಿನಲ್ಲಿ ಕೂಡಿ ಹಾಕಿ ಬಳಿಕ ಚಾಕು ತೋರಿಸಿ, ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣವನ್ನು ಕಸಿದು ಜೀವ ಬೆದರಿಕೆ ಹಾಕಿದ್ದಾರೆ.
ಆರೋಪಿಗಳನ್ನು ಶಾರೀಕ್, ಇರ್ಫಾನ್ ಎಂದು ಗುರುತಿಸಲಾಗಿದೆ. ಇವರ ಜತೆಗೆ ಇನ್ನೂ ಇಬ್ಬರು ಅಪರಿಚಿತರು ಇದ್ದರು ಎಂದು ಮಹಮ್ಮದ್ ನಿಹಾಲ್ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
- Advertisement -