- Advertisement -
- Advertisement -


ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕರಾದ ಕೊಬ್ರಿಮಠ ಶ್ರೀಕಾಂತ್ ಬನ್ನಿಂತಾಯರ ಪುತ್ರರಾದ ಸೀತಾರಾಮ ಬನ್ನಿಂತಾಯರನ್ನು ಇತ್ತೀಚೆಗೆ ದೆಹಲಿಯ ಕೇಂದ್ರೀಯ ಸಂಸ್ಕೃತ ಮಹಾವಿದ್ಯಾಲಯವು ನಡೆಸಿದ “ಶ್ಲೋಕ ಅಂತ್ಯಾಕ್ಷರಿ” ಸ್ಪರ್ಧೆಯಲ್ಲಿ ನಮ್ಮ ಕರ್ನಾಟಕ ರಾಜ್ಯದಿಂದ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದು ಕೀರ್ತಿ ತಂದಿರುವುದಕ್ಕಾಗಿ ಕರ್ನಾಟಕ ರಾಜ್ಯಪಾಲರಾದ ತವಾರ್ ಚಂದ್ ಗೆಹ್ಲೋಟ್ ರವರು ರಾಜಭವನದಲ್ಲಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ . ಸೀತಾರಾಮ ಬನ್ನಿಂತಾಯರು ಉಡುಪಿಯ ಎಸ್ ಎಂ ಎಸ್ ಪಿ ಸಂಸ್ಕೃತ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ.
ಗೌರವ ಸ್ವೀಕರಿಸಿದ ಸೀತಾರಾಮ ಬನ್ನಿಂತಾಯರಿಗೆ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಪರಿಚಾರಕ ವರ್ಗ ಹಾಗೂ ಅನಂತಾಡಿಯ ಸಮಸ್ತ ಭಕ್ತಾದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- Advertisement -








