Sunday, June 14, 2026
spot_imgspot_img
spot_imgspot_img

ಕೇರಳದ ಹೈಕೋರ್ಟ್ ಮಾಜಿ ನ್ಯಾಯಾಧೀಶ ಸೇರಿದಂತೆ 18 ಜನ ಬಿಜೆಪಿಗೆ

- Advertisement -
- Advertisement -

ಕೊಚ್ಚಿ:ಕೇರಳದ ಹೈಕೋರ್ಟ್ ಮಾಜಿ ನ್ಯಾಯಾಧೀಶರಾದ ಪಿ ಎನ್ ರವೀಂದ್ರನ್ ಮತ್ತು ವಿ ಚಿದಂಬರೇಶ್ ಹಾಗೂ ಹಲವಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ 18 ಜನ ಕೊಚ್ಚಿಯಲ್ಲಿ ಬಿಜೆಪಿಗೆ ಸೇರಿದ್ದಾರೆ. ಭಾನುವಾರ (ಫೆ.28) ತ್ರಿಪುಣಿಥುರದಲ್ಲಿ ನಡೆದ ‘ವಿಜಯ ಯಾತ್ರೆ’ ಸಮಾರಂಭದಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸಮ್ಮುಖದಲ್ಲಿ ಇವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.

“ನಾನು ಬಿಜೆಪಿಯ ಸಹ ಪ್ರಯಾಣಿಕನಾಗಿದ್ದೇನೆ. ಈಗ ನಾನು ಅಧಿಕೃತವಾಗಿ ಪಕ್ಷಕ್ಕೆ ಸೇರಿದ್ದೇನೆ. ನಾನು ದೆಹಲಿಯಲ್ಲಿರುವುದರಿಂದ ಕೊಚ್ಚಿಯಲ್ಲಿ ನಡೆಯುತ್ತಿರುವವ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ” ಎಂದು ಚಿದಂಬರೇಶ್ ಹೇಳಿದ್ದಾರೆ.

ಪಾಲಕ್ಕಾಡ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ತನ್ನ ವಿದ್ಯಾರ್ಥಿ ದಿನಗಳಲ್ಲಿ ಎಬಿವಿಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೆ ಎಂದು ಚಿದಂಬರೇಶ್ ಹೇಳಿಕೊಂಡಿದ್ದಾರೆ.

- Advertisement -

Related news

error: Content is protected !!