Saturday, June 6, 2026
spot_imgspot_img
spot_imgspot_img

ಕೇರಳದ ಕೊಚ್ಚಿಯಲ್ಲಿ ಪತನವಾದ ಗ್ಲೈಡರ್ ವಿಮಾನ: ಇಬ್ಬರು ನೌಕಾಪಡೆ ಅಧಿಕಾರಿಗಳು ಸಾವು.

- Advertisement -
- Advertisement -

ಕೊಚ್ಚಿ : ಗ್ಲೈಡರ್ ವಿಮಾನ ಪತನವಾಗಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 7.30ರ ಹೊತ್ತಿಗೆ ಕೇರಳದ ಕೊಚ್ಚಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.

ಮೃತ ಅಧಿಕಾರಿಗಳನ್ನು ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಎಂದಿನಂತೆ  ಗ್ಲೈಡರ್ ಹಾರಾಟ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ.ಐಎನ್ ಎಸ್ ಗರುಡಾದಿಂದ ದಿನನಿತ್ಯದ ತರಬೇತಿಗಾಗಿ ಗ್ಲೈಡರ್ ಹೊರಟಿತ್ತು ಎಂದು ವರದಿ ತಿಳಿಸಿದೆ.

ರವಿವಾರ ಮುಂಜಾನೆ ಏಳು ಗಂಟೆಯ ಸುಮಾರಿಗೆ ತೊಪ್ಪುಂಪಾಡಿ ಸೇತುವೆ ಬಳಿ ಪತನವಾಗಿ ಬಿದ್ದಿದೆ. ಘಟನೆಯ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ನೌಕಾಪಡೆಯ ಅಧಿಕಾರಿಗಳಾದ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಅವರನ್ನು ಕೂಡಲೇ ಸ್ಥಳೀಯ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿತಾದರೂ, ಅವರುಗಳು ಬದುಕಿ ಉಳಿಯಲಿಲ್ಲ ಎಂದು ವರದಿಯಾಗಿದೆ. ದುರಂತ ಕುರಿತು ನೌಕಾಪಡೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ.

- Advertisement -

Related news

error: Content is protected !!