Thursday, April 25, 2024
spot_imgspot_img
spot_imgspot_img

ಕೋಹ್ಲಿ ಬಾಯ್ಸ್ ನ ಪರಿಸರ ಪ್ರೇಮ

- Advertisement -G L Acharya panikkar
- Advertisement -

ದುಬೈ(ಅ.25): ಐ ಪಿ ಎಲ್ ನ 13 ನೇ ಆವೃತ್ತಿಯಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ಕೊಹ್ಲಿ ಬಾಯ್ಸ್ ಭಾನುವಾರ ಸಿ.ಎಸ್. ಕೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿಯನ್ನು ಧರಿಸುವ ಮೂಲಕ ತಮ್ಮ ಪರಿಸರ ಪ್ರೇಮ ಮತ್ತು ಜಾಗೃತಿಯನ್ನು ಅನಾವರಣಗೊಳಿಸಲಿದ್ದಾರೆ.

2011 ರಿಂದ ರಾಯಲ್ ಚಾಲೆಂಜರ್ಸ್ ಈ ಹಸಿರು ಜಾಗೃತಿಯ ಕ್ರಾಂತಿಯನ್ನು ಆರಂಭಿಸಿದ್ದು ಇದು ಅವರ ತಂಡದ ಅವಿಭಾಜ್ಯ ಅಂಗವಾಗಿದೆ.

ರಾಯಲ್ ಚಾಲೆಂಜರ್ಸ್ ತಮ್ಮ ಟ್ವೀಟರ್ ಖಾತೆಯಲ್ಲಿ ‘Go Green ‘ ಎಂಬ ಪೋಸ್ಟನ್ನು ಹಾಕಿದ್ದು ತಮ್ಮ ಅಭಿಮಾನಿಗಳಲ್ಲಿ ಪರಿಸರ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!