Sunday, April 28, 2024
spot_imgspot_img
spot_imgspot_img

ಕೊಳ್ನಾಡು-ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಾಣಿ ಹಾಗು ಕಾರ್ಡ್ ವಿತರಣಾ ಶಿಬಿರ

- Advertisement -G L Acharya panikkar
- Advertisement -

ವಿಟ್ಲ: ಭಾರತೀಯ ಜನತಾ ಪಾರ್ಟಿ, ಕೊಳ್ನಾಡು ಗ್ರಾಮ; 221 ಹಾಗು 222 ಬೂತ್ ಸಮಿತಿ, ಕುಳಾಲು ಇದರ ವತಿಯಿಂದ, ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರಮೋದಿಯವರ ಕನಸಿನ ಅನೇಕ ಜನಪರ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಾಣಿ ಹಾಗು ಕಾರ್ಡ್ ವಿತರಣಾ ಶಿಬಿರ, ನಿನ್ನೆ ಶ್ರೀ ಶಾರದಾ ಭಜನಾ ಮಂದಿರ, ದಾಸಗಿರಿ – ಕುಳಾಲು ಇದರ ವಠಾರದಲ್ಲಿ ಜರುಗಿತು.

ಕೊಳ್ನಾಡು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಯುತ ನಾರಾಯಣ ಶೆಟ್ಟಿ , ಕುಲ್ಯಾರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಆನೆಯಾಲ, ಪ್ರಧಾನ ಕಾರ್ಯದರ್ಶಿ ಲೋಹಿತ್ ಅಗರಿ, ಬಂಟ್ವಾಳ ರೈತ ಮೋರ್ಚಾದ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಅಗರಿ, ಮಂಕುಡೆ ಬೂತ್ ಸಮಿತಿ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕೊಡಂಗೆ, 221ನೇ ಬೂತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ರಮೇಶ್ ಕಾಮತ್, 222ನೇ ಬೂತಿನ ಅಧ್ಯಕ್ಷರಾದ ಚಿನ್ನಪ್ಪ ಗೌಡ, ಪಕ್ಷದ ಹಿರಿಯರಾದ ಆನಂದ ಪೂಜಾರಿ ಕುಳಾಲು, ಚಂದ್ರಹಾಸ ಶೆಟ್ಟಿ ಪಟ್ಲಕೋಡಿ, ಸದಾನಂದ ಶೆಟ್ಟಿ ಅಗರಿ, ನಾಗೇಶ್ ಶೆಟ್ಟಿ ಮಾಡ್ಯಲಮಾರು, ಆನಂದ ಸಾಲ್ಯಾನ್, ಜಗದೀಶ್ ಶೆಟ್ಟಿ ತಡೆಂಗಳ, ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ದಾಸಗಿರಿ – ಕುಳಾಲು ಮತ್ತು ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶಿವಾಜಿ ಶಾಖೆ – ಕುಂಟ್ರಕಲ ಇದರ ಪದಾಧಿಕಾರಿಗಳು ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಒಟ್ಟು 318 ಆಯುಷ್ಮಾನ್ ಭಾರತ್ ಫಲಾನುಭವಿಗಳನ್ನು ನೋಂದಾಯಿಸಲಾಯಿತು.
ಬಂಟ್ವಾಳ ಮಂಡಲ ಉಪಾಧ್ಯಕ್ಷರಾದ ಜಯರಾಮ್ ನಾಯ್ಕ್ ಕುಂಟ್ರಕಲ ನಿರೂಪಿಸಿದರು. ಕೊಳ್ನಾಡು ಮಹಾಶಕ್ತಿಕೇಂದ್ರದ ಪ್ರಮುಖರಾದ ಶಶಿಧರ್ ರೈ ಕುಳಾಲು ಸ್ವಾಗತಗೈದರು.

222ನೇ ಬೂತ್ ಸಮಿತಿ ಕಾರ್ಯದರ್ಶಿ ಯೋಗೀಶ್ ನಾಯ್ಕ್ ಕುಂಟ್ರಕಲ ಧನ್ಯವಾದಗೈದರು.
ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ, ಬಂಟ್ವಾಳ ರೈತ ಮೋರ್ಚಾದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಟ್ಟತ್ತಿಲಕೋಡಿ, ಕೊಳ್ನಾಡು ಪಂಚಾಯತ್ ನ ಮಾಜಿ ಸದಸ್ಯರಾದ ಹರೀಶ್ ಟೈಲರ್ ಮಂಕುಡೆ, ಪಕ್ಷದ ಪ್ರಮುಖರಾದ ಬಾಲಕೃಷ್ಣ ಸೆರ್ಕಳ, ವೇಣುಗೋಪಾಲ್ ಆಚಾರ್ಯ ಮಂಕುಡೆ, ವಿಶ್ವನಾಥ ಪೂಜಾರಿ ನರ್ಕಳ ಕಾರ್ಯಕ್ರಮದಲ್ಲಿಗೆ ಭೇಟಿ ನೀಡಿ ಶುಭ ಹಾರೈಸಿದರು.

- Advertisement -

Related news

error: Content is protected !!