Friday, July 31, 2026
spot_imgspot_img
spot_imgspot_img

ಕೊಳ್ನಾಡು: ಭಾರೀ ಮಳೆಗೆ ಮನೆ ಹಿಂಬದಿಯ ಗುಡ್ಡ ಕುಸಿತ; ಅಪಾಯದ ಸ್ಥಿತಿಯಲ್ಲಿ ಸೆರ್ಕಳ ರಾಜೀವಿ ಶೆಟ್ಟಿಯವರ ಮನೆ

- Advertisement -
- Advertisement -

ಕೊಳ್ನಾಡು: ಭಾರೀ ಮಳೆಗೆ ಕೊಳ್ನಾಡು ಗ್ರಾಮದ ಸೆರ್ಕಳದಲ್ಲಿ ಮನೆ ಹಿಂಬದಿಯ ಗುಡ್ಡ ಕುಸಿದು ಬಿದ್ದಿದ್ದು ಮನೆ ಅಪಾಯದ ಸ್ಥಿತಿಯಲ್ಲಿದೆ.

ಸೆರ್ಕಳ ರಾಜೀವಿ ಶೆಟ್ಟಿಯವರ(1-124)ಮನೆ ಹಿಂಬದಿಯ ಎತ್ತರದ ಗುಡ್ಡ ಕುಸಿದು ಬಿದ್ದಿದ್ದು ಯಾವುದೇ ಕ್ಷಣದಲ್ಲಿಯೂ ಇನ್ನಷ್ಟು ಕುಸಿಯಲು ಬಾಯ್ಬಿಟ್ಟಿದೆ.

ಮನೆಯ ಹಿಂಬದಿ ಗೋಡೆಗೆ ತಾಗಿಕೊಂಡೇ ಕುಸಿದು ಬಿದ್ದಿರುವ ಮಣ್ಣನ್ನು ಸ್ಥಳೀಯ ಯುವಕರ ತಂಡ ತೆರವುಗೊಳಿಸುವ ಮೂಲಕ ಮತ್ತಷ್ಟು ಸಂಭವಿಸಬಹುದಾಗಿದ್ದ ದುರಂತವನ್ನು ತಪ್ಪಿಸಿದ್ದಾರೆ.

ಆದರೆ ಮೇಲ್ಭಾಗದ ಗುಡ್ಡ ಈಗಾಗಲೇ ಬಾಯ್ಬಿಟ್ಟಿದ್ದು ಯಾವುದೇ ಕ್ಷಣ ಕುಸಿಯುವ ಹಂತದಲ್ಲಿದೆ. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಗುಡ್ಡಕ್ಕೆ ನೀರು ಇಂಗದಂತೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದು ದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಸ್ಪಂದಿಸಬೇಕಾಗಿದೆ.

- Advertisement -

Related news

error: Content is protected !!