Tuesday, July 28, 2026
spot_imgspot_img
spot_imgspot_img

ವಿಟ್ಲ: ಕೋಲ್ಪೆ ಶ್ರೀ ಶಿರಾಡಿ ಜುಮಾದಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಮೇ.23 ಹಾಗೂ ಮೇ. 24ರಂದು ನಡೆಯಲಿರುವ ಗ್ರಾಮ ದೈವ ಶ್ರೀ ಶಿರಾಡಿ ಜುಮಾದಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಾ.6ರಂದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕೆ.ಎಸ್ ಮುಕ್ಕುಡ ಸದಸ್ಯರಾದ ದೇಜಪ್ಪ ಕೋಲ್ಪೆ, ವಿ.ಕೆ.ಕುಟ್ಟಿ, ಚಂದ್ರಶೇಖರ ಕಂಬಳಿ, ವಿಜಯ ಕುಮಾರ್ ಸೂರ್ಯ, ಉಷ ಮುಂಡ್ರಬೈಲು, ಶಶಿಪ್ರಭ ಮಿತ್ತೂರು, ಪ್ರಧಾನ ಅರ್ಚಕರಾಗದ ಗೋವಿಂದ ಜೋಯಿಸರು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ರಮೇಶ್ ಭಟ್ ಭಂಡಾರಮನೆ, ಕಾರ್ಯಾಧ್ಯಕ್ಷರಾದ ದಿವಾಕರ ದಾಸ್ ನೇರ್ಲಾಜೆ, ಅಧ್ಯಕ್ಷರಾದ ಕೋಲ್ಪೆಗುತ್ತು ರಾಜಾರಾಮ‌ ಶೆಟ್ಟಿ, ಉಪಾಧ್ಯಕ್ಷರಾದ ಸುರೇಶ್ ಪೂಜಾರಿ ಸೂರ್ಯ,

ಪ್ರಧಾನ ಕಾರ್ಯದರ್ಶಿ ಪ್ರಫುಲ್ಲ ಚಂದ್ರ ಪಿ.ಜಿ. ಕೋಲ್ಪೆ, ಜತೆ ಕಾರ್ಯದರ್ಶಿ ಜಗದೀಶ್ ದೇವಸ್ಯ, ಕೋಶಾಧಿಕಾರಿ ವೆಂಕಟರಮಣ ಭಟ್ ಸೂರ್ಯ, ಗೌರವ ಸಲಹೆಗಾರರಾದ  ಗೋಪಾಲಕೃಷ್ಣ ಭಟ್ ಬೈಪದವು, ಕೃಷ್ಣಪ್ಪ ಕೆಮನಾಜೆ, ಪದ್ಮನಾಭ ಸಪಲ್ಯ ಕೊಡಂಚರಪಾಲು, ಜಯಂತ ದೇವಸ್ಯ, ಈಶ್ವರ ಗೌಡ ನಾಯ್ತೋಟ್ಟು, ಸತೀಶ್ ಕಂರ್ದೆಲು, ಪುರುಷೋತ್ತಮ ಕೋಲ್ಪೆ, ಜನಾರ್ದನ ಬಡಜ, ಹರೀಶ್  ಉರಿಮಜಲು, ರಾಘವ ಗೌಡ ಉರಿಮಜಲು,ಗ್ರಾಮಸ್ಥರಾದ ಶೀನ ಸಪಲ್ಯ ಕೋಲ್ಪೆ, ಕೃಷ್ಣಪ್ಪ ಉರಿಮಜಲು ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!