Monday, June 22, 2026
spot_imgspot_img
spot_imgspot_img

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ

- Advertisement -
- Advertisement -

ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನ.3ರಂದು ಚಪ್ಪರ ಮುಹೂರ್ತ ನಡೆಯಿತು.

ಕ್ಷೇತ್ರದ ಅರ್ಚಕ ವೇ.ವೂ. ಗೋಪಾಲಕೃಷ್ಣ ರವರು ವಿಧಿವಿಧಾನ ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಎಸ್. ಮುಕ್ಕುಡ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ರಾಜಾರಾಮ ಶೆಟ್ಟಿ, ಕೋಲ್ಪೆಗುತ್ತು, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಂ.ಹೆಚ್. ರಮೇಶ್ ಭಟ್ ಭಂಡಾರಮನೆ, ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಈಶ್ವರ ಗೌಡ ನಾಯಿತೊಟ್ಟು, ಗ್ರಾಮಸ್ಥರಾದ ಜಯಂತ ಕೋಲ್ಪೆ, ವೆಂಕಟರಮಣ ಭಟ್ ಸೂರ್ಯ, ಪದ್ಮನಾಭ ಕೊಡೆಂಚೆರೆಪಾಲು, ವಿಜಯ ಸೂರ್ಯ, ಯತೀಶ್, ಪುರಂದರ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!