Tuesday, May 21, 2024
spot_imgspot_img
spot_imgspot_img

ಕೊಣಾಜೆ: ಮನೆಯೊಳಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ; ಮನೆಮಂದಿಯ ಚೀರಾಟಕ್ಕೆ ಮೊಬೈಲ್‌ ಬಿಟ್ಟು ಓಡಿದ ಕಾಮುಕ..!!

- Advertisement -G L Acharya panikkar
- Advertisement -

ಕೊಣಾಜೆ: ಗಾಂಜಾ ವ್ಯಸನಿಯೋರ್ವ ಮಧ್ಯರಾತ್ರಿ ಮನೆಯ ಹಂಚು ತೆಗೆದು ಮನೆಯೊಳಗೆ ನುಗ್ಗಿಎರಡು ಮಕ್ಕಳ ತಾಯಿಗೆ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದ ದೆಬ್ಬೇಲಿ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಯತ್ನ ಆರೋಪದಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ದೆಬ್ಬೇಲಿ ನಿವಾಸಿ ನೌಫಾಲ್ (38) ಬಂಧಿತ ಆರೋಪಿ.

ಸಂತ್ರಸ್ತ ಮಹಿಳೆ ಬಾಡಿಗೆ ಮನೆಯೊಂದರಲ್ಲಿ ಗಂಡ, ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದಾರೆ. ಗಂಡ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ವೃತ್ತಿಗೆ ತೆರಳಿದ್ದು ಮನೆಯೊಳಗೆ ಸಂತ್ರಸ್ತ ಮಹಿಳೆ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಗ್ಗಿದ ನೌಫಾಲ್ ನೌಫಾಲ್ ಮಹಿಳೆ ಮಂಚದ ಕೆಳಗೆ ಮಲಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ತಕ್ಷಣ ಎಚ್ಚೆತ್ತ ಮಹಿಳೆ ಮತ್ತು ಮಕ್ಕಳು ಬೊಬ್ಬೆ ಹಾಕಿದ್ದು, ಆರೋಪಿ ಮುಂಬಾಗಿಲ ಮೂಲಕ ಓಡಿ ಪರಾರಿಯಾಗಿದ್ದಾನೆ. ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು.

ಘಟನೆ ಸಂಬಂಧ ಸ್ಥಳೀಯರು ಆರೋಪಿಗಾಗಿ ಹುಡುಕಾಟ ನಡೆಸುವಾಗ ಮನೆಯೊಳಗೆ ಆರೋಪಿ ನೌಫಾಲನ ಮೊಬೈಲ್ ಪತ್ತೆಯಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಿಗ್ಗೆನೇ ಆರೋಪಿಯನ್ನು ಬಂಧಿಸಲಾಗಿದೆ. ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Related news

error: Content is protected !!