Friday, March 29, 2024
spot_imgspot_img
spot_imgspot_img

ಕೊಣಾಜೆ ಭಜನಾ ಮಂದಿರ ಅಪವಿತ್ರಗೊಳಿಸಿದ ಪ್ರಕರಣ-ಇಬ್ಬರು ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಮಂಗಳೂರು: ಕೊಣಾಜೆ ಬಳಿಯ ಗೋಪಾಲಕೃಷ್ಣ ಭಜನಾ ಮಂದಿರದ ಒಳಗೆ ಮಲ, ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ತಲಪಾಡಿಯ ಕೊಮರಂಗಳ ನಿವಾಸಿ ಮಹಮ್ಮದ್ ಸೊಹೈಲ್ (19) ಮತ್ತು ತಲಪಾಡಿಯ ಪಿಲಿಕೂರು ನಿವಾಸಿ ನಿಜಾಮುದ್ದೀನ್ (21) ಬಂಧಿತರು. ವಿವಿಧೆಡೆ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದ್ದ ಇಬ್ಬರು ಯುವಕರ ಕೃತ್ಯದ ಬೆನ್ನತ್ತಿ ಹೋದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಗೋಪಾಲಕೃಷ್ಣ ಮಂದಿರಕ್ಕೆ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲು ನುಗ್ಗಿದ್ದರು. ಆದರೆ, ಅಲ್ಲಿ ಯಾವುದೇ ರೀತಿಯ ಹಣವಾಗಲೀ, ಬೆಲೆಬಾಳುವ ಆಭರಣಗಳಾಗಲೀ ಸಿಕ್ಕಿರಲಿಲ್ಲ. ಕಾಣಿಕೆ ಡಬ್ಬಿ ಒಡೆದ ಕೃತ್ಯ ಬೇರೆ ಯಾರೋ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸಲು ಮಲ, ಮೂತ್ರ ವಿಸರ್ಜಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶಶಿಕುಮಾರ್, ಇವರ ತಂಡದಲ್ಲಿ ಇನ್ನೂ ಆರು ಮಂದಿ ಇದ್ದಾರೆ ಎನ್ನುವುದು ಗೊತ್ತಾಗಿದೆ. ಇದಲ್ಲದೆ ಕೋಣಾಜೆ, ಉಳ್ಳಾಲ, ಕಂಕನಾಡಿ ಗ್ರಾಮಾಂತರ, ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದಿದೆ. ಈ ಪೈಕಿ ಐದು ದೈವಸ್ಥಾನದ ಹುಂಡಿ ಕಳವು ಪ್ರಕರಣಗಳಾಗಿವೆ.

ಕೋಣಾಜೆಯಲ್ಲಿ ಮಂದಿರದ ಕೃತ್ಯ ನಡೆಯುವುದಕ್ಕೂ ಸ್ವಲ್ಪ ದಿನಗಳ ಹಿಂದೆ ಅಲ್ಲಿಯೇ ಸಮೀಪದಲ್ಲಿ ದೈವಸ್ಥಾನ ಒಂದರ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದರು. ಅದರಲ್ಲಿ ಹಣ ಕಳವುಗೈದು, ಕಾಣಿಕೆ ಡಬ್ಬಿಯನ್ನು ಗೋಪಾಲಕೃಷ್ಣ ಮಂದಿರದ ಬಳಿ ಎಸೆದಿದ್ದರು. ಅದೇ ದಿನ ಗೋಪಾಲಕೃಷ್ಣ ಮಂದಿರಕ್ಕೂ ನುಗ್ಗಲು ಪ್ಲಾನ್ ಹಾಕಿದ್ದರು ಎಂದು ತಿಳಿಸಿದರು.

ತಲಪಾಡಿಯ ಪಿಲಿಕೂರು ಎಂಬಲ್ಲಿ ಸಿಕ್ಕಿದ ಸಿಸಿಟಿವಿ ವಿಡಿಯೋ ಆಧರಿಸಿ, ಸಂಶಯಯದ ಮೇರೆಗೆ ಇಬ್ಬರನ್ನು ವಶಕತ್ಕೆ ಪಡೆದು ವಿಚಾರಿಸಿದಾಗ ದುಷ್ಕೃತ್ಯ ಬಯಲಾಗಿದೆ. ಕೊಣಾಜೆ ಪರಿಸರದ ಮುಲಾರದ ಅರಸು ಮುಂಡಿತ್ತಾಯ ದೈವಸ್ಥಾನದ ಕಾಣಿಕೆ ಹುಂಡಿ ಕಳವು, ಜ.15ರಂದು ಮಾಡೂರಿನ ರಸ್ತೆ ಬದಿಯ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು, ಕುತ್ತಾರಿನ ಆದಿಸ್ಥಳದ ಕೊರಗಜ್ಜ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು ಯತ್ನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ ಕೌಂಟರಿಗೆ ನುಗ್ಗಿ ಕಳವು ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಡಿಯೋ ಸ್ಕೂಟರ್, ಚೂರಿ, ಸ್ಪಾನರ್, ವಿವಿಧ ರೀತಿಯ ಕಾಣಿಕೆ ಡಬ್ಬಿಗಳನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!