- Advertisement -
- Advertisement -



ಕೊಣಾಜೆ: ವ್ಯಕ್ತಿಯೋರ್ವರು ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಗೆ ಬಂದು ಬಳಿಕ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ನಾಪತ್ತೆಯಾದ ವ್ಯಕ್ತಿ ವರ್ಕಾಡಿ ಗ್ರಾಮದ ಪಾವಳಗುತ್ತು ರಮೇಶ್ ಶೆಟ್ಟಿ (49) ಎಂದು ಗುರುತಿಸಲಾಗಿದೆ.
ರಮೇಶ್ ಶೆಟ್ಟಿ ಎಂಬವರು ಮುಡಿಪು ಎಂಬಲ್ಲಿ LIC ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜುಲೈ 17 ರಂದು ಬೆಳಗ್ಗೆ ಮುಡಿಪುವಿನಲ್ಲಿ ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಗೆ ಬಂದು ಮೊಬೈಲ್, ಸೇರಿದಂತೆ ಇನ್ನಿತರ ತನ್ನಲ್ಲಿದ್ದ ವಸ್ತುಗಳನ್ನು ಕಚೇರಿಯಲ್ಲಿಟ್ಟು ಅಲ್ಲಿಂದ ತೆರಳಿರುತ್ತಾರೆ. ಬಳಿಕ ನಾಪತ್ತೆಯಾಗಿದ್ದು, ಎರಡು ದಿನಗಳಾದರೂ ಎಲ್ಲೂ ಪತ್ತೆಯಾಗಿಲ್ಲ. ಈ ಬಗ್ಗೆ ಮನೆಯವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
- Advertisement -








