- Advertisement -
- Advertisement -


ಕೊಪ್ಪಳ: ವಾಯುವಿಹಾರಕ್ಕೆಂದು ಬಂದಿದ್ದ ಅಜ್ಜಿಯ ಮೇಲೆ ಟಿಪ್ಪರ್ ಹರಿದು ಸಾವನ್ನಪ್ಪಿರುವಂತಹ ಭೀಕರವಾದ ಘಟನೆ ಜಿಲ್ಲೆಯ ಬನ್ನಿಕಟ್ಟಿ ಸಮೀಪ ನಡೆದಿದೆ. ಅಪಘಾತದಲ್ಲಿ ಸುಶೀಲಮ್ಮ (65) ಮೃತಪಟ್ಟ ದುರ್ದೈವಿ.
ತಾಯಿ ಅಪಘಾತ ಕಂಡು ಮಗ ಸದಾಶಿವ ಕಣ್ಣೀರಿಟ್ಟಿದ್ದಾರೆ. ವಾಯುವಿಹಾರಕ್ಕೆಂದು ಸುಶೀಲಮ್ಮ ಬಂದಿದ್ದರು. ಇದೇ ವೇಳೆ ಕಾಂಕ್ರೀಟ್ ತುಂಬಿಕೊಂಡು ಟಿಪ್ಪರ್ ಬಂದಿದೆ. ಕೆಎ 27 ಎ 8983 ನಂಬರ್ನ ಟಿಪ್ಪರ್ ಚಕ್ರದ ಕೆಳಗೆ ಸಿಲುಕಿ ಅಜ್ಜಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕೊಪ್ಪಳದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ


- Advertisement -