Tuesday, July 28, 2026
spot_imgspot_img
spot_imgspot_img

9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ

- Advertisement -
- Advertisement -

ಕೊಪ್ಪಳ: ಮನೆ ಬಳಿ ಆಟವಾಡುತ್ತಿದ್ದ 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ.
ಈ ಘಟನೆ ತಾಲೂಕಿನ ಸಂಗಾಪೂರ ಶ್ರೀರಂಗದೇವರಾಯಲು ನಗರದಲ್ಲಿ ಶನಿವಾರ(ಡಿ.12) ಸಂಜೆ ಜರುಗಿದೆ.
ಶ್ರೀರಂಗದೇವರಾಯಲು ನಗರದ ಗುಡ್ಡದ ಪಕ್ಕದ ಮನೆಯ ಹತ್ತಿರ ಇರುವ ಕುರಿ ಹಟ್ಟಿಯಲ್ಲಿ ಆಟವಾಡುತ್ತಿದ್ದ ಆಂಜನೇಯ ತಂದೆ ರಾಜಪ್ಪ (9) ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಹೊತ್ತುಕೊಂಡು ಹೋಗುವಾಗ ಬಾಲಕನ ತಂದೆ ಹಾಗೂ ಇತರರು ಗದ್ದಲ ಮಾಡಿದಾಗ ಬಾಲಕನನ್ನು ಬಿಟ್ಟು ಹೋಗಿದೆ.


ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಪರಣ್ಣ ಮುನವಳ್ಳಿ ಅರಣ್ಯ ಸಚಿವ ಆನಂದಸಿಂಗ್ ಅವರಿಗೆ ಮೊಬೈಲ್ ಮೂಲಕ ಮಾತನಾಡಿ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!