Wednesday, April 24, 2024
spot_imgspot_img
spot_imgspot_img

ಮೋದಿಯ ಕೊರೋನ ಸಂಜೀವಿನಿ ಯಾತ್ರೆ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಲಸಿಕೆ ತಯಾರಿಕಾ ಘಟಕಗಳಿಗೆ ತೆರಳಿ, ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಹಾಗೂ ತಯಾರಿಕೆ ಬಗ್ಗೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಪುಣೆಯಲ್ಲಿರುವ ಫಾರ್ಮಾ ದೈತ್ಯ ಸೀರಮ್​​ ಇನ್ಸ್​​ಟಿಟ್ಯೂಟ್​, ಅಹಮದಾಬಾದ್​ನಲ್ಲಿರುವ ಝೈಡಸ್​ ಕ್ಯಾಡಿಲಾ, ಹಾಗೂ ಹೈದರಾಬಾದ್​​ನಲ್ಲಿರುವ ಭಾರತ್​​​​ ಬಯೋಟೆಕ್​​ನ ಫಾರ್ಮಾ ಘಟಕಗಳಿಗೆ ಅವರು ಭೇಟಿ ನೀಡಲಿದ್ದಾರೆ.

ಝೈಡಸ್​ ಕ್ಯಾಡಿಲಾ ಅಹಮದಾಬಾದ್​ನ ಚಾಂಗೋದಾರ್​ ಇಂಡಸ್ಟ್ರಿಯಲ್ ಏರಿಯಾದಲ್ಲಿದೆ. ತನ್ನ ಕೊರೊನಾ ಲಸಿಕೆ ZyCoV-Dಯ ಮೊದಲ ಹಂತದ ಪರೀಕ್ಷೆ ಮುಗಿದಿದ್ದು, ಆಗಸ್ಟ್​ನಿಂದ ಎರಡನೇ ಹಂತದ ಕ್ಲೀನಿಕಲ್ ಟ್ರಯಲ್ ಶುರು ಮಾಡಿರುವುದಾಗಿ ಈ ಹಿಂದೆ ಸಂಸ್ಥೆ ತಿಳಿಸಿತ್ತು. ಇಂದು ಮೋದಿ ಗುಜರಾತ್​​ಗೆ ಭೇಟಿ ನೀಡ್ತಿದ್ದಾರೆ. ಇದೇ ಹೊತ್ತಲ್ಲಿ ಇಂದು ಬೆಳಗ್ಗೆ 9.30ಕ್ಕೆ ಝೈಡಸ್​ ಕ್ಯಾಡಿಲಾದ ಘಟಕಕ್ಕೆ ಭೇಟಿ ಕೊಟ್ಟು, ಸಂಸ್ಥೆಯು ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.


ಮಧ್ಯಾಹ್ನ 1:30ಕ್ಕೆ ಪುಣೆಯ ಸೀರಂ ಇನ್ಸ್​ಟಿಟ್ಯೂಟ್​ಗೆ ತೆರಳಿ ಅಲ್ಲಿ, ಕೋವಿಶೀಲ್ಡ್​ ವ್ಯಾಕ್ಸಿನ್ ಬಗ್ಗೆ ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಲಿದ್ದಾರೆ.

ಪುಣೆಯಿಂದ ತೆಲಂಗಾಣದ ಭಾರತ್ ಬಯೋಟೆಕ್​ಗೆ ತೆರಳಿರುವ ನಮೋ ಅಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿರುವ ಕೋವ್ಯಾಕ್ಸಿನ್ ಕುರಿತು ತಜ್ಞರಿಂದ ವಿವರಣೆ ಪಡೆಯಲಿದ್ದಾರೆ. ಲಸಿಕೆ ತಯಾರಿಕೆ, ಸವಾಲುಗಳು ಹಾಗೂ 130 ಕೋಟಿ ಭಾರತೀಯರಿಗೆ ಲಸಿಕೆ ವಿತರಣೆ ಮಾಡಲು ರೋಡ್​ಮ್ಯಾಪ್ ಬಗ್ಗೆ ವಿಜ್ಞಾನಿಗಳು ಪ್ರಧಾನಿ ಮೋದಿಗೆ ವಿವರಣೆ ನೀಡಲಿದ್ದಾರೆ.

- Advertisement -

Related news

error: Content is protected !!