Sunday, June 21, 2026
spot_imgspot_img
spot_imgspot_img

ಕೋಟ: ಪತ್ನಿ ಸಾವನ್ನಪ್ಪಿದ ಅಘಾತದಲ್ಲಿ ಪತಿಯೂ ಮೃತ್ಯು..!

- Advertisement -
- Advertisement -

ಕೋಟ: ಪತ್ನಿಯ ನಿಧನ ಕೇಳಿ ಅಘಾತಗೊಂಡ ಪತಿ ಮೃತಪಟ್ಟ ಘಟನೆ ಕೋಟ ಇಲ್ಲಿನ ಕಂಬಳಕಟ್ಟು ಎಂಬಲ್ಲಿ ನಡೆದಿದೆ.

ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಧರ್ಮಪತ್ನಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಮುತ್ತು ಪೂಜಾರ್ತಿ(53ವ) ಅನಾರೋಗ್ಯದಿಂದ ನಿಧನರಾದರು. ಪತ್ನಿಯ ನಿಧನ ಕೇಳಿ ಅಘಾತಗೊಂಡ ಪತಿ ಕೃಷ್ಣ ಪೂಜಾರಿ(58)ಪತ್ನಿಯ ಅಂತ್ಯಸಂಸ್ಕಾರ ನೆರವೆರಿಸಿ ಕೆಲಹೊತ್ತಲ್ಲೆ ಇಹಲೋಕ ತ್ಯಜಿಸಿದ್ದಾರೆ.

ಬನ್ನಾಡಿ ಕೃಷ್ಣ ಪೂಜಾರಿ ಬುಧವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದು ಮೃತರು ಬ್ರಹ್ಮಬೈದರ್ಕಳ ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂಸೇವಕರಾಗಿ ನಿರಂತರ ಸೇವೆ,ಕೃಷಿರಾಗಿ ಗುರುತಿಸಿಕೊಂಡಿದ್ದರು.ಒರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!