- Advertisement -
- Advertisement -




ಬೆಳ್ತಂಗಡಿ: ಸೇತುವೆಯ ತಡೆಗೋಡೆಗೆ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಢಿಕ್ಕಿಯಾಗಿದ್ದು, ಭಾರೀ ಅನಾಹುತ ತಪ್ಪಿದ ಘಟನೆ ಬೆಳ್ತಂಗಡಿಯ ಕೊಯ್ಯರು ಬಳಿಯ ಕಾಂತಾಜೆ ಎಂಬಲ್ಲಿ ನಡೆದಿದೆ.
ಬಂದಾರಿನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಈ ಬಸ್ಸಿನಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಅನ್ನು ಚಲಾಯಿಸಿದ್ದರ ಪರಿಣಾಮ ಕಾಂತಾಜೆಯ ಕಡಿದಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಬಸ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದು, ಬಸ್ ಅದ್ಭುತವಾಗಿ ಅಂಚಿನಲ್ಲಿಯೇ ಉಳಿದುಕೊಂಡಿತು, 20 ಅಡಿ ಪ್ರಪಾತಕ್ಕೆ ಧುಮುಕುವುದನ್ನು ತಪ್ಪಿಸಿತು. ಘಟನೆಯಿಂದ ತತ್ತರಿಸಿದ್ದರೂ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ
- Advertisement -








