Monday, June 15, 2026
spot_imgspot_img
spot_imgspot_img

ಮುನ್ನಾರ್ ಪ್ರವಾಸಿಗರಿಗೆ ವಿಶೇಷ ಸೌಲಭ್ಯ

- Advertisement -
- Advertisement -

ಮುನ್ನಾರ್(ಕೇರಳ): ಕೇರಳದ ಪ್ರಸಿದ್ದ ಪ್ರವಾಸಿ ತಾಣ ಮುನ್ನಾರ್ ನಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆ ಸಂಪನ್ಮೂಲ ಕ್ರೋಡೀಕರಿಸಲು ಹೊಸ ಮಾರ್ಗ ಕಂಡುಕೊಂಡಿದೆ. ಮುನ್ನಾರ್ ಗೆ ಭೇಟಿ ನೀಡುವ ಪ್ರವಾಸಿಗರು ಕೇರಳ ರಾಜ್ಯ ಸಾರಿಗೆ ನಿಗಮದ ಸ್ಲೀಪರ್ ಬಸ್ ನಲ್ಲಿ ರಾತ್ರಿ ಮಲಗಬಹುದಾಗಿದೆ. ಇದಕ್ಕಾಗಿ 100 ರೂಪಾಯಿ ನೀಡಬೇಕು.

ಬಸ್ಸು ನಿಲ್ದಾಣದಲ್ಲಿ ಇರುವ ಶೌಚಾಲಯವನ್ನು ಈ ಪ್ರಯಾಣಿಕರು ಬಳಸಲು ಅವಕಾಶ ನೀಡಲಾಗಿದೆ. ಪ್ರಾಯೋಗಿಕವಾಗಿ ಎರಡು ಸ್ಲೀಪರ್ ಬಸ್ ಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಒಂದು ಬಸ್ ನಲ್ಲಿ 16 ಮಂದಿಗೆ ರಾತ್ರಿ ನಿದ್ದೆ ಮಾಡಲು ಅವಕಾಶ ನೀಡಲಾಗಿದೆ.

ಕೊರೋನಾ ಕಾರಣದಿಂದಾಗಿ ಅಂತಾರಾಜ್ಯ ಬಸ್ ಗಳ ಸಂಚಾರ ಇಳಿಮುಖವಾಗಿದೆ. ಹೆಚ್ಚಿನ ಬಸ್ ಗಳು ಡಿಪೋಗಳಲ್ಲಿ ತಂಗಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಕೇರಳ ಸಾರಿಗೆ ಸಂಸ್ಥೆ ಮುಂದಾಗಿದೆ.

- Advertisement -

Related news

error: Content is protected !!