Thursday, June 18, 2026
spot_imgspot_img
spot_imgspot_img

ವಿಟ್ಲ: ಕುಲಾಲ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಕುಲಾಲ ಸಂಘ ವಿಟ್ಲ ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ಸನ್ನಿದಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಕುಲಾಲ ಸಂಘ ಅಧ್ಯಕ್ಷ ಬಿ. ಕೆ. ಬಾಬು, ಕೃಷ್ಣಯ್ಯ ವಿಟ್ಲ ಅರಮನೆ, ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಸ್ಥಾಪಕಾಧ್ಯಕ್ಷ ‘ರಮಾನಾಥ ವಿಟ್ಲ, ಮಹಿಳಾಘಟಕದ ಅಧ್ಯಕ್ಷೆ ಸುಚಿತ್ರ ರಮಾನಾಥ್ ವಿಟ್ಲ, ಕುಲಾಲ ಸಂಘ ಹಾಗೂ ಮಹಿಳಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು, ಉಪಸ್ಥಿತರಿದ್ದರು.

ಕಳೆದ 25 ವರ್ಷಗಳಿಂದ ಕುಲಾಲ ಭಾಂಧವರ ಒಗ್ಗೂಡುವಿಕೆಯಿಂದ ಕುಲಾಲ ಸಂಘವು ರಜತ ವರ್ಷದ ಸಂಭ್ರಮದಲ್ಲಿ ನೂತನ ಕಟ್ಟಡದ ಲೋಕಾರ್ಪಣೆಗೆ ಅಣಿಯಾಗಿದೆ.

ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಇವರ ಆಶೀರ್ವಾದದೊಂದಿಗೆ ಈ ವರ್ಷದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಬೆಳ್ಳಿ ಹಬ್ಬದ ಸಂಭ್ರಮ, ಹಾಗೂ ನೂತನ ಕಟ್ಟಡ “ರಜತಭವನ” ಈ ವರ್ಷದ ಫೆಬ್ರವರಿ 25ರಂದು ನಡೆಯಲಿದೆ.

ಫೆಬ್ರವರಿ 24ರ ಸಂಜೆ ವಾಸ್ತುಹೋಮ,25ರಂದು ಬೆಳಿಗ್ಗೆ ಗಣಹೋಮ, ವಾರ್ಷಿಕೋತ್ಸವ, ಸಾಧಕರ ಸನ್ಮಾನ , ಸಂಜೆ ಉದ್ಘಾಟನೆ ಸಮಾರೋಪ ಬಳಿಕ ಪವನ ಕಲಾವಿದೆರ್ ಕುಡ್ಲ ಇವರಿಂದ “ತೂಯಿಲೆಕ ಅತ್ತ್” ತುಳು ನಾಟಕ ನಡೆಯಲಿದೆ.

- Advertisement -

Related news

error: Content is protected !!