Sunday, July 19, 2026
spot_imgspot_img
spot_imgspot_img

ಪುತ್ತೂರು: ಗೋಳಿತೊಟ್ಟು ಸಮೀಪ ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ; ಚಾಲಕ, ಪ್ರಯಾಣಿಕ ಪಾರು

- Advertisement -
- Advertisement -

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ಗೋಳಿತೊಟ್ಟು ಸಮೀಪದ ಶಿರಾಡಿಗುಡ್ಡೆ ಬಳಿ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿನತ್ತ ಕಾರು ಸಂಚರಿಸುತ್ತಿತ್ತು. ಗೋಳಿತೊಟ್ಟು ಸಮೀಪದ ಶಿರಾಡಿಗುಡ್ಡೆ ತಲುಪುತ್ತಿದ್ದಂತೆ ವಾಹನದ ಎಂಜಿನ್ ಭಾಗದಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಅಪಾಯದ ಮುನ್ಸೂಚನೆ ಅರಿತ ಚಾಲಕ ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ಜೊತೆಯಲ್ಲಿದ್ದ ಪ್ರಯಾಣಿಕನೊಂದಿಗೆ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಎನ್‌ಎಚ್-75 ನಾಲ್ಕು ಪಥ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಸಂಸ್ಥೆಯ ಟ್ಯಾಂಕರ್‌ನಲ್ಲಿದ್ದ ನೀರನ್ನು ಬಳಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಫಟನೆಯಲ್ಲಿ ಕಾರಿನ ಎಂಜಿನ್ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ವಾಹನದ ಉಳಿದ ಭಾಗಕ್ಕೆ ಭಾಗಶಃ ಹಾನಿಯಾಗಿದೆ.

- Advertisement -

Related news

error: Content is protected !!