Tuesday, May 21, 2024
spot_imgspot_img
spot_imgspot_img

ಕುಂಬಳೆ: ಆಟೋರಿಕ್ಷಾ ಮಗುಚಿ ಬಿದ್ದು ಚಾಲಕ ಮೃತ್ಯು

- Advertisement -G L Acharya panikkar
- Advertisement -

ಕುಂಬಳೆ: ಇಂಟರ್‌ಲಾಕ್‌ ಲೋಡ್‌ಗೆ ರಿಕ್ಷಾ ಡಿಕ್ಕಿ ಹೊಡೆದು, ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಪೆರ್ಮುದೆಯ ರಸ್ತೆಯಲ್ಲಿ ಮಲೆನಾಡು ಹೈವೇ ನಿರ್ಮಾಣಕ್ಕಾಗಿ ಇಳಿಸಿದ್ದ ಇಂಟರ್‌ಲಾಕ್‌ ಲೋಡಿಗೆ ರಿಕ್ಷಾ ಬಡಿದು ಕವುಚಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚೇವಾರು ಮಿತ್ತಡ್ಕದ ರಾಮ ಎಂಬವರ ಪುತ್ರ, ರಿಕ್ಷಾ ಚಾಲಕ ಕಿಶೋರ್ ಯಾನೆ ಪ್ರಕಾಶ್ ಸಿ. ಎಚ್ (34) ಮೃತಪಟ್ಟ ಯುವಕ.

ಇಂದು (ಜು.9) ಬೆಳಿಗ್ಗೆ 11 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದೆ. ಪ್ರತಿದಿನ ಚೇವಾರು ರಿಕ್ಷಾ ಸ್ಟ್ಯಾಂಡಿನಲ್ಲಿ ಇರಿಸಿ ಬಾಡಿಗೆ ನಡೆಸುತ್ತಿದ್ದ ಕಿಶೋರ್ ಇಂದು ಪೆರ್ಮುದೆಗೆ ಔಷಧಿಗಾಗಿ ತೆರಳಿರುವ ವೇಳೆ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಗಾಯಗೊಂಡ ಕಿಶೋರ್‌ನನ್ನು ಬಂದ್ಯೋಡಿನ ಖಾಸಗೀ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಿಲ್ಲ. ಮೃತರು ಸ್ಥಳೀಯ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಈ ಬಗ್ಗೆ ಕುಂಬಳೆ ಪೊಲೀಸ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!