Saturday, June 13, 2026
spot_imgspot_img
spot_imgspot_img

ಬಿ.ಸಿ ರೋಡ್‌ನಿಂದ ಉಪ್ಪಿನಂಗಡಿವರೆಗೆ ಚತುಷ್ಪಥ ಕಾಮಗಾರಿ; ವಾಹನ ಸವಾರರೇ ಅಪಾಯವಿದೆ ಎಚ್ಚರಿಕೆ..!

- Advertisement -
- Advertisement -

ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಭರದಿಂದ ನಡೆಯುತ್ತಿದ್ದು ಮಳೆಗಾಲ ಆಗಮಿಸುತ್ತಿದ್ದಂತೆ ಅವಘಡಗಳೂ ಜಾಸ್ತಿಯಾಗಿದೆ. ಬಿಸಿರೋಡ್ ನಿಂದ ಉಪ್ಪಿನಂಗಡಿವರೆಗೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ದ್ವಿಚಕ್ರ ವಾಹನ ಸವಾರರು ಅಂತೆಯೇ ವಾಹನ ಸವಾರರು ಜಾಗರೂಕತೆಯಿಂದ ಚಲಿಸಬೇಕಾದ ಅನಿವಾರ್ಯತೆ ಸಾಕಷ್ಟಿದೆ.

ಹೆದ್ದಾರಿಯಲ್ಲಿ ಧೂಳು ಮತ್ತು ಕೆಸರಿನ ಮಧ್ಯೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಇತ್ತೀಚಿಗೆ ಸುರಿದ ಸಣ್ಣ ಮಳೆಗೆ ಸೂರಿಕುಮೇರು ದಾಸಕೋಡಿ ಮಧ್ಯೆ ಹಲವಾರು ಬೈಕ್‌ಗಳು ಸ್ಕಿಡ್ ಆಗಿ ಬಿದ್ಧ ಘಟನೆಯೂ ನಡೆದಿತ್ತು. ಸಣ್ಣಪುಟ್ಡ ಗಾಯದೊಂದಿಗೆ ಮತ್ತು ಕೆಸರನ್ನು ಮೆತ್ತಿಕೊಂಡು ಸಂಕಟ ಅನುಭವಿಸಿದ್ದಾರೆ.

ಇದು ಬಹಳ ಅಪಾಯಕಾರಿಯಾಗಿದ್ದು ದ್ವಿಚಕ್ರ ವಾಹನಗಳ ಹಿಂದಿನಿಂದ ಘನ ವಾಹನಗಳು ನಿರ್ಲಕ್ಷ್ಯವಾಗಿ ಅತೀ ವೇಗದಿಂದ ಬರುತ್ತಿದ್ದು ಸ್ಕಿಡ್ ಆಗಿ ಬೀಳುವ ವಾಹನಗಳ ಪಾಲಿಗೆ ಇದು ಅತ್ಯಂತ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅತಿವೇಗವಾಗಿ ಚಲಿಸದೆ ಮತ್ತು ಜಾಗರೂಕತೆಯಿಂದ ಸಂಚರಿಸುವುದು ಎಲ್ಲಾ ವಾಹನ ಚಾಲಕರ ಕರ್ತವ್ಯವಾಗಿದೆ.

- Advertisement -

Related news

error: Content is protected !!