Friday, April 26, 2024
spot_imgspot_img
spot_imgspot_img

ಕುಮಟಾದ ಹಂದಿಗೋಣ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ. ಅನಿಲ ಸೋರಿಕೆಗೆ ಬೆಚ್ಚಿಬಿದ್ದ ಜನತೆ.!

- Advertisement -G L Acharya panikkar
- Advertisement -

ಕಾರವಾರ: ಅಡುಗೆ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಕುಮಟಾ ತಾಲೂಕಿನ ಹಂದಿಗೋಣ ಬಳಿ ನಡೆದಿದೆ.

ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಶನಿವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ‌ ಮದ್ಯದಲ್ಲೇ ಟ್ಯಾಂಕರ್ ​ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ನಿಂದ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ‌ ಆಗುತ್ತಿದೆ ಎನ್ನಲಾಗಿದೆ‌.ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ.

ಸಣ್ಣ ಪ್ರಮಾಣದ ಲೀಕೇಜ್ ಇರಬಹುದು ಎಂದು ಆಸುಪಾಸಿನ ಮನೆಯವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಒಲೆ, ದೀಪ ಹಚ್ಚದಂತೆ ಸೂಚಿಸಲಾಗಿದೆ. ಗ್ಯಾಸ್​ ಟ್ಯಾಂಕರ್​ ಬಿದ್ದ ಪರಿಣಾಮ ಕುಮಟಾ-ಹೊನ್ನಾವರ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಅನಿಲ ಸೋರಿಕೆ ನಿಯಂತ್ರಿ ಟ್ಯಾಂಕರ್​ ಅನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸುತ್ತಿದ್ದರು.

- Advertisement -

Related news

error: Content is protected !!