Tuesday, July 28, 2026
spot_imgspot_img
spot_imgspot_img

ವಿಟ್ಲ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಗೋವಿಂದ ನಾಯ್ಕ ಹುದ್ದೆಯಿಂದ ವಜಾ

- Advertisement -
- Advertisement -

ವಿಟ್ಲ: ಕುಂಡಡ್ಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಗೋವಿಂದ ನಾಯ್ಕ ಇವರನ್ನು ಸಂಘಕ್ಕೆ ವಂಚನೆ, ಹಣ ದುರುಪಯೋಗ ಮತ್ತು ದಾಖಲೆಗಳ ತಿದ್ದುಪಡಿ ಮುಂತಾದ ಆರೋಪಗಳ ಮೇಲೆ ದಿನಾಂಕ 12-10-2020 ರಂದು ತನಿಖಾಪೂರ್ವ ಅಮಾನತು ಮಾಡಲಾಗಿತ್ತು.

ಇವರ ಮೇಲಿನ ಆಪಾದನೆಗಳಿಗೆ ಸದರಿಯವರ ವಿರುದ್ದ ಆಂತರಿಕ ತನಿಖೆ ನಡೆಸುವುದೆಂದು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ತನಿಖಾಧಿಕಾರಿಯಾಗಿ ಪುತ್ತೂರು ಶ್ರೀ ಡಿ. ಶಂಭು ಭಟ್ ನ್ಯಾಯವಾದಿಗಳು ಇವರನ್ನು ನಿಯಕ್ತಿಗೊಳಿಸಲಾಗಿತ್ತು.

ತನಿಖಾಧಿಕಾರಿಯವರು ಕೊಟ್ಟ ವರದಿಯಲ್ಲಿ ಅಮಾನತುಗೊಂಡ ಕಾರ್ಯದರ್ಶಿಯವರ ಮೇಲಿರುವ ಎಲ್ಲಾ ಆರೋಪಗಳು ಸಾಬೀತುಗೊಂಡ ಹಿನ್ನಲೆಯಲ್ಲಿ ಅಮಾನತುಗೊಳಿಸಲ್ಪಟ್ಟ ಕಾರ್ಯದರ್ಶಿ ಗೋವಿಂದ ನಾಯ್ಕ ರನ್ನು 27-02-2021 ರಂದು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಸೇವೆಯಿಂದ ವಜಾಗೊಳಿಸಲಾಗಿರುತ್ತದೆ.

- Advertisement -

Related news

error: Content is protected !!