Thursday, June 18, 2026
spot_imgspot_img
spot_imgspot_img

ಕುಂದಾಪುರ: ಗೋ ಮಾಂಸ ಸಾಗಾಟ; ಓರ್ವ ಆರೋಪಿ ವಶ, ಮತ್ತೋರ್ವ ಪರಾರಿ

- Advertisement -
- Advertisement -

ಬೈಂದೂರು: ನ್ಯಾನೋ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ, ಓರ್ವನನ್ನು ಬಂಧಿಸಿದ್ದ ಘಟನೆ ಬೈ೦ದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಕು೦ದಾಪುರದಿ೦ದ ಭಟ್ಕಳಕ್ಕೆ ಗೋಮಾ೦ಸ ಸಾಗಾಟ ಮಾಡುತ್ತಿದ್ದ ನ್ಯಾನೋ ಕಾರನ್ನು ತಡೆದು ನಿಲ್ಲಿಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಭಟ್ಕಳ ನಿವಾಸಿ ಮಹಮ್ಮದ್‌ ಗೌಸ್‌ ಗವಾಯಿ(37) ಬಂಧಿತ ಆರೋಪಿ. ಪರಾರಿಯಾದ ಆರೋಪಿಯನ್ನು ನಜ್ಮುಲ್‌ ಎ೦ದು ತಿಳಿದುಬಂದಿದೆ.

ಕಾರಿನಲ್ಲಿ ಸುಮಾರು 22ಸಾವಿರ ರೂ ಮೌಲ್ಯದ 150 ಕೆ.ಜಿ ಗೋ ಮಾಂಸ ಪತ್ತೆಯಾಗಿದೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!