Monday, January 20, 2025
spot_imgspot_img
spot_imgspot_img

ಕುಂದಾಪುರ: ಕಾರು-ಲಾರಿ ನಡುವೆ ಅಪಘಾತ; 6 ಮಂದಿ ಗಂಭೀರ ಗಾಯ..!

- Advertisement -
- Advertisement -

ಕುಂದಾಪುರ: ಕಾರು ಮತ್ತು ಲಾರಿಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಎಸ್‌ಬಿಐ ಉದ್ಯೋಗಿಗಳು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ ನಾಗೂರು ಸಮೀಪದ ಅರೆ ಹೊಳೆ ಬೈಪಾಸ್ ಎಂಬಲ್ಲಿ ನಡೆದಿದೆ.

ಗಂಭೀರ ಗಾಯಗೊಂಡಿದ್ದವರನ್ನು ಚಿಕ್ಕಮಗಳೂರಿನ ಸುತ್ತಮುತ್ತಲಿನ ಎಸ್‌ಬಿಐ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಾಪ್ ಪ್ರೇಮ್ ಪ್ರಜ್ವಲ್ ಅಂತೋನಿ ಸುರೇಶ್ ಹಾಗೂ ಹಟ್ಟಿಕುದ್ರು ನಿವಾಸಿ ವಿಘ್ನೇಶ್ ಎಂದು ಗಗುರುತಿಸಲಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಶನಿವಾರ ಸಂಜೆ ತಮ್ಮ ಸ್ನೇಹಿತನಾದ ವಿಜ್ಞೇಶ್ ಮನೆಯಲ್ಲಿ ಉಳಿದುಕೊಂಡಿದ್ದು ಭಾನುವಾರ ಮಧ್ಯಾಹ್ನ ಗೋಕರ್ಣ ದೇವಸ್ಥಾನಕ್ಕೆ ಹೊರಟಿದ್ದರು. ಆದರೆ ಸಂಜೆ ಸುಮಾರು 3:45ರ ಸುಮಾರಿಗೆ ನಾಗೂರು ಸಮೀಪದ ಅರೆಹೊಳೆ ಬೈಪಾಸ್ ತಲುಪಿದಾಗ ಲಾರಿ ಕಾರಿಗೆ ಢಿಕ್ಕಿಯಾಗಿದೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಕಾಲಿನಲ್ಲಿದ್ದ 6 ಜನರ ಪೈಕಿ ಐವರು ಗಂಭೀರ ಗಾಯಗೊಂಡಿದ್ದಾರೆ. ಪ್ರಜ್ವಲ್ ಹಾಗೂ ಅಂಥೋನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಪ್ರತಾಪ್ ಮತ್ತು ಪ್ರೇಮ್ ಎಂಬುವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರ ಪ್ರದೇಶ ಮೂಲದ ಸುರೇಶ್ ಎಂಬಾತನನ್ನ ಮತ್ತು ಹಟ್ಟಿ ಕುದ್ರು ನಿವಾಸಿ ವಿಜ್ಞೇಶ್ ಎಂಬುವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!